ADVERTISEMENT

14ಕ್ಕೆ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 9:00 IST
Last Updated 12 ಡಿಸೆಂಬರ್ 2013, 9:00 IST

ಸಂತೇಬೆನ್ನೂರು: ಇಲ್ಲಿನ ವಿಜಯ ಯುವಕ ಸಂಘದ ಆಶ್ರಯದಲ್ಲಿ ಡಿ.14 ರಂದು ಬೆಳಿಗ್ಗೆ 11ಕ್ಕೆ ತಾಲ್ಲೂಕು ಮಟ್ಟದ ದಿ. ಕೆಂಚಮ್ಮ ಸಿದ್ದಪ್ಪ ಅಂತರ ಪ್ರಾಥಮಿಕ ಶಾಲಾ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಚಿತ್ರಕಲೆಯನ್ನು ಪ್ರೋತ್ಸಾಹಿಸಲು ಸ್ಪರ್ಧೆ ಏರ್ಪಡಿಸಲಾಗಿದೆ.

ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲೆಯಿಂದ ಒಬ್ಬ ವಿದ್ಯಾರ್ಥಿ ಪಾಲ್ಗೊಳ್ಳಲು ಅವಕಾಶವಿದೆ. ಚಿತ್ರಕಲೆಯಲ್ಲಿ ಪರಿಣಿತರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಿತ್ರಕಲೆಯ ಮೂಲಾಂಶಗಳ ಬಗ್ಗೆ ತಿಳಿಸಲಿದ್ದಾರೆ ಎಂದು ದತ್ತಿ ದಾನಿ ವಕೀಲ ಕೆ.ಆರ್‌. ಸುಭಾಷ್‌ ಮಾಹಿತಿ ನೀಡಿದರು.

ನಿವೃತ್ತ ಡಿಡಿಪಿಐ ಕೆ. ಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಅತಿಥಿಗಳಾಗಿ ಬಿಇಒ ಜಿ.ಆರ್‌. ತಿಪ್ಪೇಶಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಇ.ಆರ್‌.ಸುಜಾತಾ, ನಿವೃತ್ತ ಶಿಕ್ಷಕ ಎಂ.ಅಬ್ದುಲ್‌ ವಾಹಿದ್‌, ಬೆಂಗಳೂರಿನ ಆರ್‌ಬಿಎಎನ್ಎಂಎಸ್‌ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಜಯಪ್ಪ, ಆಡಳಿತಾಧಿಕಾರಿ ಸುಮತೀಂದ್ರ ನಾಡಿಗ್‌, ಸಂಪನ್ಮೂಲ ವ್ಯಕ್ತಿ ಎಂ.ಎನ್‌.ರವಿಕುಮಾರ್‌ ಭಾಗವಹಿ ಸಲಿದ್ದಾರೆ. ಕೆ.ಆರ್‌.ಸುಭಾಷ್‌ ಬಹುಮಾನ ವಿತರಿಸುವರು.

ಬೆಂಗಳೂರಿನ ಬೆನಕ ಕಲಾ ಮಂದಿರದ ಪ್ರಾಂಶುಪಾಲ ಪಿ.ಎಂ.ರವಿನಾಥ್‌ ಪಟ್ಟಣಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷ ಎಸ್‌.ಪಿ.ಜಗನ್ನಾಥ್‌, ನಿವೃತ್ತ ಶಿಕ್ಷಕ ಎಸ್‌.ಸಿ.ಯಲ್ಲಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ನಾಡಿಗ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT