ADVERTISEMENT

19 ಪಕ್ಷ, 37 ಸ್ವತಂತ್ರ, 116 ನಾಮಪತ್ರ

ನಾಮಪತ್ರ ಹಿಂಪಡೆಯಲು 27 ಕಡೆ ದಿನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:04 IST
Last Updated 25 ಏಪ್ರಿಲ್ 2018, 9:04 IST

ದಾವಣಗೆರೆ: ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್, ಜೆಡಿಯು ಅಲ್ಲದೇ ವಿವಿಧ 15  ಪಕ್ಷಗಳಲ್ಲಿ ಗುರುತಿಸಿಕೊಂಡ 21 ಅಭ್ಯರ್ಥಿಗಳು 24 ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 90 ಅಭ್ಯರ್ಥಿಗಳಿಂದ 116 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪಕ್ಷೇತರರಾಗಿ ಒಟ್ಟು 37 ಅಭ್ಯರ್ಥಿಗಳು 45 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 8 ಜನ 15 ನಾಮಪತ್ರ, ಬಿಜೆಪಿಯ 10 ಜನ 16 ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ 6 ಮಂದಿ 10 ನಾಮಪತ್ರ, ಜೆಡಿಯುನಿಂದ ಇಬ್ಬರು, 2 ನಾಮಪತ್ರ ಸಲ್ಲಿಸಿದ್ದಾರೆ. ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿಯಿಂದ ನೌಶಿನ್‌ ತಾಜ್‌ (ದಾವಣಗೆರೆ ದಕ್ಷಿಣ), ಕೆ.ಎ. ವಿಮಲಾ  (ಮಾಯಕೊಂಡ), ಎಂ.ಟಿ. ವಿಜಯಕುಮಾರ್‌ (ಚನ್ನಗಿರಿ) ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ಎಚ್‌.ಶೇಖ್‌ ಹಬೀಬುಲ್ಲ (ದಾವಣಗೆರೆ ದಕ್ಷಿಣ), ಕೆ.ಸಿ. ಬಸವರಾಜಪ್ಪ (ಮಾಯಕೊಂಡ), ಅಖಿಲ ಭಾರತ್‌ ಹಿಂದೂ ಮಹಾಸಭಾದಿಂದ ಪಿ. ಶ್ರೀನಿವಾಸ (ಮಾಯಕೊಂಡ), ಎಚ್‌.ಆರ್‌. ಹರೀಶ್‌ (ಚನ್ನಗಿರಿ), ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಮಾರ್ಕಿಸ್ಟ್‌ ಲೆನಿನಿಸ್ಟ್‌) (ಲಿಬರೇಷನ್‌) ಬೀರಪ್ಪ (ಹರಿಹರ), ಇದ್ಲಿ ರಾಮಪ್ಪ (ಹರಪನಹಳ್ಳಿ), ಜನಹಿತ ಪಕ್ಷದಿಂದ ಎಚ್‌.ಬಿ. ರಿಜ್ವಾನ್‌ ಸಾಬ್‌  (ದಾವಣಗೆರೆ ದಕ್ಷಿಣ), ಅಬ್ದುಲ್‌ ಬಾರಿ (ಹರಪನಹಳ್ಳಿ) ನಾಮಪತ್ರ ಸಲ್ಲಿಸಿದ್ದಾರೆ. ಈ ನಾಲ್ಕೂ ಪಕ್ಷಗಳು ತಲಾ ಇಬ್ಬರನ್ನು ಕಣಕ್ಕಿಳಿಸಿವೆ.

ADVERTISEMENT

ಉಳಿದ 10 ಪಕ್ಷಗಳಿಂದ ತಲಾ ಒಬ್ಬರು ಕಣಕ್ಕಿಳಿದಿದ್ದಾರೆ. ಆಮ್‌ ಆದ್ಮಿ ಪಾರ್ಟಿಯಿಂದ ಕೆ.ಎಲ್‌. ರಾಘವೇಂದ್ರ  (ದಾವಣಗೆರೆ ದಕ್ಷಿಣ), ಲೋಕ್‌ ಆವಾಜ್‌ ದಳದಿಂದ ಮುದ್ದಾಪುರದ ರೆಹಮಾನ್‌ ಸಾಬ್‌ (ದಾವಣಗೆರೆ ದಕ್ಷಿಣ), ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದಿಂದ ಅವಿನಾಶ್‌ (ಮಾಯಕೊಂಡ), ಬಿ. ಭಾರತೀಯ ಬಹುಜನ ಕ್ರಾಂತಿ ದಳದಿಂದ ಕುಮಾರ್‌ ನಾಯ್ಕ್‌ (ಮಾಯಕೊಂಡ), ಸಾಮಾನ್ಯ ಜನತಾ ಪಾರ್ಟಿ (ಲೋಕ್‌ ತಾಂತ್ರಿಕ್) ನಿಂದ ಎಚ್‌. ನರಸಿಂಹ ಮೂರ್ತಿ (ಮಾಯಕೊಂಡ), ಕರ್ನಾಟಕ ರಾಜ್ಯ ರೈತ ಸಂಘದಿಂದ ಬಿ.ಆರ್‌.ರುದ್ರೇಶ್‌ (ಚನ್ನಗಿರಿ), ಕರ್ನಾಟಕ ಜನತಾ ಪಕ್ಷದಿಂದ ಮೊಹಮ್ಮದ್‌ ಜಹೀರ್‌ ಅಹಮದ್‌ (ಚನ್ನಗಿರಿ), ಬಹುಜನ ಸಮಾಜ ಪಾರ್ಟಿಯಿಂದ ಸತ್ಯನಾರಾಯಣ ರಾವ್‌ (ಹೊನ್ನಾಳಿ), ಸಮಾಜವಾದಿ ಪಾರ್ಟಿಯಿಂದ ಬಿ.ಎಚ್‌.ಸಿದ್ದಪ್ಪ (ಜಗಳೂರು), ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕಿಸ್ಟ್‌)ದಿಂದ ಅಜ್ಜಪ್ಪ (ಜಗಳೂರು) ನಾಮಪತ್ರ ಸಲ್ಲಿಸಿದ್ದಾರೆ.

ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಹಿಂಪಡೆಯಲು ಇದೇ 27 ಕಡೆ ದಿನ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.