ADVERTISEMENT

22 ಪಿಒಪಿ ಗಣಪ ಮೂರ್ತಿಗಳ ವಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 15:28 IST
Last Updated 29 ಆಗಸ್ಟ್ 2019, 15:28 IST
ದಾವಣಗೆರೆಯ ಸೀಮೆಎಣ್ಣೆ ಬಂಕ್‌ ಬಳಿ ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿರುವುದು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸೀಮೆಎಣ್ಣೆ ಬಂಕ್‌ ಬಳಿ ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿರುವುದು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಇಲ್ಲಿನ ದೇವರಾಜ ಅರಸು ಬಡಾವಣೆಯ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ 22 ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಪಾಲಿಕೆ ಆಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಪಾಲಿಕೆ ಪರಿಸರ ಅಧಿಕಾರಿ ಸುರೇಶ್, ಪರಿಸರ ಎಂಜಿನಿಯರ್ ಸುನೀಲ್, ಆರೋಗ್ಯ ನಿರೀಕ್ಷಕರಾದ ಅಂಜನಪ್ಪ, ನಿಖಿಲ್ ಇತರರು ದಾಳಿ ನಡೆಸಿದ್ದಾರೆ. ತೆಲಂಗಾಣದಿಂದ ಮೂರ್ತಿಗಳನ್ನು ತಂದು ಶೇಖರಿಸಲಾಗಿತ್ತು.

5 ಅಡಿಗಳಿಗಿಂತ ಎತ್ತರವಾದ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸದಂತೆ ಜಿಲ್ಲಾಡಳಿತದ ಸಭೆಯಲ್ಲಿ ಈಚೆಗೆ ಸೂಚನೆ ನೀಡಿತ್ತು. ಅದನ್ನೂ ಮೀರಿ ಇದನ್ನು 5 ಅಡಿಗೂ ಹೆಚ್ಚು ಎತ್ತರ ಇರುವ 6 ಗಣಪನ ಮೂರ್ತಿಗಳನ್ನು ಶೇಖರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.