ADVERTISEMENT

23 ಸಾವಿರ ರೋಗಿಗಳ ಉಚಿತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 6:20 IST
Last Updated 17 ಆಗಸ್ಟ್ 2012, 6:20 IST

ದಾವಣಗೆರೆ: ನಗರದ ಪಿ.ಜೆ. ಬಡಾವಣೆಯಲ್ಲಿ ಇರುವ ಪ್ರಾಂಜಲಿ ಬೋನ್ ಅಂಡ್ ಜಾಯಿಂಟ್ ಕೇರ್ ಸಂಸ್ಥೆ ಮೂರು ವರ್ಷಗಳ ಅವಧಿಯಲ್ಲಿ 23,700 ರೋಗಿಗಳಿಗೆ ಉಚಿತ ತಪಾಸಣೆ ನಡೆಸಿದೆ.

ಸಂಸ್ಥೆ ಆ. 16ಕ್ಕೆ ಮೂರು ವರ್ಷ ಪೂರೈಸಿದ್ದು, ಇದುವರೆಗೆ 460 ರೋಗಿಗಳಿಗೆ ಉಚಿತವಾಗಿ ಇಂಪ್ಲಾಂಟ್ (ಮೆಟಲ್)ಗಳನ್ನು ಪೂರೈಸಲಾಗಿದೆ. 35 ಮಂದಿ ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಾಗಿದೆ. 850 ಮಂದಿಯನ್ನು ಒಳರೋಗಿಗಳಾಗಿ ದಾಖಲಿಸಲಾಗಿದೆ. 650 ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಬಿನಯ್‌ಕುಮಾರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬತ್ತ ಕೊಯ್ಯುವ ಯಂತ್ರಕ್ಕೆ ಸಿಲುಕಿ ಕೈ ಬೆರಳು ಕಳೆದುಕೊಂಡ  ಚಿತ್ರದುರ್ಗ ಜಿಲ್ಲೆಯ ಕೆಂಚಾಪುರದ ಕೇಶವಮೂರ್ತಿ ಅವರ ಕೈ ಮೊದಲಿನಂತೆ ಮಾಡಿದ್ದು, ಮಂಡಿಕೀಲು ನೋವಿಗೆ ಒಳಗಾಗಿದ್ದ ಹರಿಹರದ ಪ್ರಮೀಳಮ್ಮ ಅವರ ಎರಡೂ ಮಂಡಿ ಕೀಲುಗಳನ್ನು 5 ಗಂಟೆ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬದಲಾಯಿಸಿದ್ದು ಸಂಸ್ಥೆಯ ಸಾಧನೆ ಎಂದು ಬಿನಯ್ ಬಣ್ಣಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.