ದಾವಣಗೆರೆ: ಜಿಲ್ಲೆಯ 70 ಕೇಂದ್ರಗಳಲ್ಲಿ ಶುಕ್ರವಾರ 2306 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ಬಾಪೂಜಿ ಆಸ್ಪತ್ರೆಯ 3 ಕೇಂದ್ರಗಳು, ಎಸ್‌ಎಸ್ ಹೈಟೆಕ್ ಆಸ್ಪತ್ರೆಯ ಎರಡು ಕೇಂದ್ರಗಳು, ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಚಿಗಟೇರಿ ಆಸ್ಪತ್ರೆ, ದಾವಣಗೆರೆ ತಾಲ್ಲೂಕಿನ 24, ಹರಿಹರ ತಾಲ್ಲೂಕಿನ 7 ಚನ್ನಗಿರಿ ತಾಲ್ಲೂಕಿನ 19 ಹಾಗೂ ಜಗಳೂರು ತಾಲ್ಲೂಕಿನ 8 ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ಹಾಕಲಾಯಿತು.
ಶುಕ್ರವಾರ 3,678 ಗುರಿ ಇತ್ತು. ಅವರಲ್ಲಿ 2,306 ಮಂದಿಗೆ ಲಸಿಕೆ ನೀಡಿದ್ದು, ಶೇ 62.69 ದಾಖಲಾಗಿದೆ.
5 ಮಂದಿಗೆ ಕೊರೊನಾ: ಜಿಲ್ಲೆಯಲ್ಲಿ 5 ಮಂದಿಗೆ ಕೊರೊನಾ ಇರುವುದು ಶುಕ್ರವಾರ ದೃಢಪಟ್ಟಿದ್ದು, 22 ಮಂದಿ ಗುಣಮುಖರಾಗಿದ್ದಾರೆ.
ದಾವಣಗೆರೆ ನಗರ ಹಾಗೂ ತಾಲ್ಲೂಕು ಸೇರಿ 5 ಮಂದಿಗೆ ಸೋಂಕು ತಗುಲಿದ್ದು, ಬಿಡುಗಡೆಗೊಂಡವರಲ್ಲಿ ದಾವಣಗೆರೆ ನಗರ ಹಾಗೂ ತಾಲ್ಲೂಕಿನ 17, ಜಗಳೂರು ಹಾಗೂ ಚನ್ನಗಿರಿ ತಾಲ್ಲೂಕಿನ ತಲಾ ಒಬ್ಬರು ಹೊರ ಜಿಲ್ಲೆಯ ಇಬ್ಬರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 22,251 ಮಂದಿಗೆ ಸೋಂಕು ತಗುಲಿದೆ. 21,915 ಮಂದಿ ಗುಣಮುಖರಾಗಿದ್ದಾರೆ. 264 ಮಂದಿ ಮೃತಪಟ್ಟಿದ್ದಾರೆ. 72 ಸಕ್ರಿಯ ಪ್ರಕರಣಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.