ADVERTISEMENT

ಬಿಜೆಪಿಗೆ ಸೋಲುವ ಭಯ: ಸಚಿವ ಲಮಾಣಿ

ಕಲ್ಲೇಶ್ವರ ಜಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸಚಿವ ಲಮಾಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 6:39 IST
Last Updated 11 ಜನವರಿ 2018, 6:39 IST
ಸಮೀಪದ ರಾಮಘಟ್ಟ ದೊಡ್ಡ ತಾಂಡದ ಶ್ರೀ ಕಲ್ಲೇಶ್ವರ ಜಾತ್ರೆಯಲ್ಲಿ ಸಚಿವ ರುದ್ರಪ್ಪ ಲಮಾಣಿ ಭಾಗವಹಿಸಿದ್ದರು.
ಸಮೀಪದ ರಾಮಘಟ್ಟ ದೊಡ್ಡ ತಾಂಡದ ಶ್ರೀ ಕಲ್ಲೇಶ್ವರ ಜಾತ್ರೆಯಲ್ಲಿ ಸಚಿವ ರುದ್ರಪ್ಪ ಲಮಾಣಿ ಭಾಗವಹಿಸಿದ್ದರು.   

ಉಚ್ಚಂಗಿದುರ್ಗ: ಬಿಜೆಪಿ ನಾಯಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ ಎಂದು ರಾಜ್ಯ ಜವಳಿ ಮತ್ತು ಮುಜರಾಯ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರು ತಿಳಿಸಿದರು.

ಹರಪನಹಳ್ಳಿ ತಾಲ್ಲೂಕು ರಾಮಘಟ್ಟ ದೊಡ್ಡ ತಾಂಡದ ಶ್ರೀ ಕಲ್ಲೇಶ್ವರ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಸಿಲಕಿರುವ ಬಿಜೆಪಿ ನಾಯಕರು ರಾಷ್ಟ್ರ ನಾಯಕರಾದ ಅಮಿತ್ ಷಾ, ನರೇಂದ್ರ ಮೋದಿಯವರಿಗೆ ದುಂಬಾಲು ಬಿದ್ದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಭಯವಿಲ್ಲ ಎಂದರು.

ಸರ್ಕಾರ 5 ವರ್ಷಗಳಲ್ಲಿ ಹಸಿವು ಮುಕ್ತ ಕರ್ನಾಟಕ, ಶಾದಿ ಭಾಗ್ಯ, ಇಂದಿರಾ ಕ್ಯಾಂಟಿನ್‌ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮತದಾರರು ಕಾಂಗ್ರೆಸ್‌ ಕೈ ಬಿಡುವುದಿಲ್ಲ ಎಂದರು.

ADVERTISEMENT

ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಹೇಳಿಕೆ ನೀಡಿರುವ ಅನಂತ ಕುಮಾರ ಹೆಗಡೆ ಅವರಿಗೆ ನಾಡಿನ ಜನರು ತಕ್ಕ ಪಾಠ ಕಲಿಸಲಿದ್ದಾರೆ, ಏಕವಚನ ಪದ ಬಳಕೆ ಶೋಭೆ ತುರುವುದಿಲ್ಲ ಎಂದರು.

ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇದ್ದು, ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.