ADVERTISEMENT

ಆಯ ವ್ಯಯ ಸಲಹಾ ಸಭೆಗೆ ನೀರಸ ಪ್ರತಿಕ್ರಿಯೆ

ಪಾಲಿಕೆ ಸಭಾಂಗಣದಲ್ಲಿ ಅಹವಾಲು ಹೇಳಿಕೊಂಡ ಬೆರಳೆಣಿಕೆ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 2:22 IST
Last Updated 3 ಫೆಬ್ರುವರಿ 2021, 2:22 IST
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅಧ್ಯಕ್ಷತೆಯಲ್ಲಿ ಅಯವ್ಯಯ ಸಲಹಾ ಸಭೆ ಮಂಗಳವಾರ ನಡೆಯಿತು
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅಧ್ಯಕ್ಷತೆಯಲ್ಲಿ ಅಯವ್ಯಯ ಸಲಹಾ ಸಭೆ ಮಂಗಳವಾರ ನಡೆಯಿತು   

ದಾವಣಗೆರೆ: ಮಹಾನಗರ ಪಾಲಿಕೆ ಬಜೆಟ್ ತಯಾರು ಮಾಡಲು ಮಂಗಳವಾರ ಸಾರ್ವಜನಿಕರ ಸಲಹಾ ಸಭೆ ಕರೆಯಲಾಗಿತ್ತು. ಸಭೆಗೆ ಭಾರಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಗಿಂತ ಪತ್ರಕರ್ತರ ಸಂಖ್ಯೆಯೇ ಹೆಚ್ಚಿತ್ತು.

ಪಾಲಿಕೆಯಲ್ಲಿ ಎಸ್ಸಿ-ಎಸ್ಟಿಗೆ ಮೀಸಲಿಟ್ಟಿರುವ ಅನುದಾನವನ್ನು ಈ ಸಮುದಾಯಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಬೇಕು. ಕೊರೊನಾದಿಂದ ಸಂಕಷ್ಟದಲ್ಲಿ ಇರುವವರಿಗೆ ಇದು ನೆರವಾಗಲಿದೆ. ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಮನೆ ಒದಗಿಸಬೇಕು ಎಂದು ಡಿಎಸ್‍ಎಸ್ ಮುಖಂಡ ನಾಗರಾಜ ಆನೆಕೊಂಡ ಮನವಿ ಮಾಡಿಕೊಂಡರು.

ADVERTISEMENT

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಮಾಡಬೇಕು. ಬೆಂಗಳೂರು ಮತ್ತು ಶಿವಮೊಗ್ಗ ನಗರಗಳಲ್ಲಿ ಈ ನಿಧಿಯನ್ನು ಸ್ಥಾಪಿಸಿ, ಪತ್ರಕರ್ತರ ನೆರವಿಗೆ ಬಂದಿದ್ದಾರೆ. ಇಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದುಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ ಕೋರಿಕೊಂಡರು.

ಮಹಾನಗರ ಪಾಲಿಕೆ ಆವರನದಲ್ಲಿ ಕ್ಯಾಂಟಿನ್ ಕಟ್ಟಡ ನಿರ್ಮಾಣ ಮಾಡುವಂತೆ ರವೀಂದ್ರನಾಥ ಬಡಾವಣೆ ಹಿತರಕ್ಷಣ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಲಹೆ ನೀಡಿದರು. ಜೋಗನ್‌ಬಾಬಾ ಬಡಾವಣೆಯಲ್ಲಿ ಬೀದಿ ದೀಪ, ಚರಂಡಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸ್ಲಂ ಜನಾಂದೋಲನ ಸಮಿತಿ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಗಮನ ಸೆಳೆದರು. ವಿಜಯನಗರದಲ್ಲಿ ಪಾಲಿಕೆ ಜಾಗವನ್ನು ಖಾಸಗಿಯವರು ಅತಿಕ್ರಮಿಸಿದ್ದು, ಅದನ್ನು ಪಾಲಿಕೆ ಮತ್ತೆ ಕಬ್ಜ ಮಾಡಬೇಕು ಎಂದು ಇಂಗಳೆ ಮಲ್ಲಿಕಾರ್ಜುನ ತಿಳಿಸಿದರು.

ಶಿವಕುಮಾರ್‌, ಪಾಲಿಕೆ ಸದಸ್ಯರಾದ ಎಚ್.ಸಿ. ಜಯಮ್ಮ, ಶಿವನಗೌಡ ಪಾಟೀಲ್, ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ನಾಯಕ, ಪತ್ರಕರ್ತ ಮಾಗನೂರು ಮಂಜಪ್ಪ, ವೀರೇಶ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.