ADVERTISEMENT

ಬೈಕ್‌ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 15:35 IST
Last Updated 26 ಸೆಪ್ಟೆಂಬರ್ 2025, 15:35 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ನ್ಯಾಮತಿ: ತಾಲ್ಲೂಕಿನ ಸುರಹೊನ್ನೆ ಹಾಗೂ ಕುದುರೆಗುಂಡಿ ನಡುವೆ ದ್ವಿಚಕ್ರ ವಾಹನಗಳ ನಡುವೆ ಶುಕ್ರವಾರ ರಾತ್ರಿ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ನ್ಯಾಮತಿಯ ಮಾಲತೇಶ್‌ (25) ಹಾಗೂ ಕುದುರೆಗುಂಡಿಯ ಶೌರ್ಯ (18) ಮೃತರು. ಮಂಜಮ್ಮ ಹಾಗೂ ಮುನಿಯ ಗಂಭೀರವಾಗಿ ಗಾಯಗೊಂಡಿದ್ದು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೌರ್ಯ ಹಾಗೂ ಮಂಜಮ್ಮ ದ್ವಿಚಕ್ರ ವಾಹನದಲ್ಲಿ ಕುದುರೆಗುಂಡಿಯಿಂದ ಸುರಹೊನ್ನೆಯತ್ತ ಬರುತ್ತಿದ್ದರು. ಮಾಲತೇಶ್‌ ಹಾಗೂ ಮುನಿಯ ಕುದುರೆಗುಂಡಿ ಕಡೆಗೆ ಸಾಗುತ್ತಿದ್ದರು. ವೇಗವಾಗಿದ್ದ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೈಕ್‌ ಚಾಲನೆ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.