ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎ. ರವೀಂದ್ರನಾಥ್ ಅವರ ಮೊಮ್ಮಗ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಪುತ್ರ ಅರುಣಕುಮಾರ ಚಲಾಯಿಸುತ್ತಿದ್ದ ಕಾರು ಭಾನುವಾರ ತಡರಾತ್ರಿ ಶಾಮನೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ಮುರಿದು ಪಕ್ಕದ ಮನೆಯ ಮೇಲೆ ಬಿದ್ದಿದೆ.
ಪವಾಡ ಸದೃಶವಾಗಿ ಕಾರಲ್ಲಿದ್ದವರೂ ಮನೆಯಲ್ಲಿ ಇದ್ದವರೂ ಪಾರಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಲು ಅರುಣಕುಮಾರ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬಿಗು ವಾತಾವರಣ ನಿರ್ಮಾಣಗೊಂಡಾಗ ಅರುಣ್ ಕುಮಾರ್ ಕಾರನ್ನು ಅಲ್ಲೇ ಬಿಟ್ಟು ತೆರಳಿದರು.
ಕಾರ್‌ನಲ್ಲಿ ಶಾಸಕರ ಪಾಸ್ ಇದೆ. ಶಾಸಕರನ್ನು ಮತ್ತುಅರುಣ ಕುಮಾರ ಅವರನ್ನು ಸ್ಥಳಕ್ಕೆಕರೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.