ADVERTISEMENT

ನ್ಯಾಮತಿ: ಮೊದಲ ಬೇಸಾಯ ಶುರು, ಜಮೀನಿನಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:28 IST
Last Updated 11 ಏಪ್ರಿಲ್ 2019, 7:28 IST
ನ್ಯಾಮತಿ ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಬುಧವಾರ ರೈತರು ಭೂಮಿ ಪೂಜೆ ನೆರವೇರಿಸಿ ಮೊದಲ ಬೇಸಾಯ ಆರಂಭಿಸಿದರು
ನ್ಯಾಮತಿ ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಬುಧವಾರ ರೈತರು ಭೂಮಿ ಪೂಜೆ ನೆರವೇರಿಸಿ ಮೊದಲ ಬೇಸಾಯ ಆರಂಭಿಸಿದರು   

ನ್ಯಾಮತಿ: ಯುಗಾದಿ ವಿಕಾರಿನಾಮ ಸಂವತ್ಸರದ ವರ್ಷದಲ್ಲಿ ಮೊದಲ ಬೇಸಾಯವನ್ನು ಮಲ್ಲಿಗೇನಹಳ್ಳಿ ರೈತರು ಬುಧವಾರ ಸಾಮೂಹಿಕವಾಗಿ ದೇವರ ಜಮೀನಿನಲ್ಲಿ ಪೂಜೆ ನೆರವೇರಿಸಿ ಆರಂಭಿಸಿದರು.

ಗ್ರಾಮದೇವತೆ ಆಂಜನೇಯಸ್ವಾಮಿ ದೇವರ ಉತ್ಸವ ಮೂರ್ತಿ ಸೂಚಿಸುವ ಮನೆಯ ವ್ಯಕ್ತಿ ದೇವರ ಜಮೀನಿನಲ್ಲಿ ಮೊದಲ ಬೇಸಾಯಕ್ಕೆ ಪೂಜೆ ಸಲ್ಲಿಸಿದ ನಂತರ ಉಳಿದ ರೈತರು ಬೇಸಾಯ ಪೂಜೆ ನೆರವೇರಿಸುವುದು ಇಲ್ಲಿನ ಪದ್ಧತಿ.

ಗ್ರಾಮದ ರೈತರು ಮುಂಜಾನೆ ಬೇಸಾಯ ಪರಿಕರಗಳನ್ನು ಸ್ವಚ್ಛಗೊಳಿಸಿ, ಎತ್ತುಗಳ ಮೈ ತೊಳೆದು, ಶೃಂಗರಿಸಿ ನೊಗ ಹೂಡಿದರು. ಮನೆಯಲ್ಲಿ ವಿವಿಧ ತರಹದ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಸಲ್ಲಿಸಿದರು.‌

ADVERTISEMENT

ಗ್ರಾಮದ ಪ್ರತಿಯೊಬ್ಬ ರೈತರು ದೇವರ ಜಮೀನಿನಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ಮಳೆ, ಬೆಳೆಯನ್ನು ಸಮೃದ್ಧಿಯಾಗಿ ನೀಡುವಂತೆ ಪ್ರಾರ್ಥಿಸಿದರು. ಯುಗಾದಿಯಂದು ಮೊದಲ ಬೇಸಾಯ ಆರಂಭ ಮಾಡುವುದು ಪೂರ್ವಜರ ಕಾಲದಿಂದ
ನಡೆದುಕೊಂಡು ಬಂದಿದೆ ಎಂದು ಗ್ರಾಮದ ಹಿರಿಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.