ADVERTISEMENT

ಶ್ರಮಿಕ ವರ್ಗದ ಹೋರಾಟ ಬೆಂಬಲಿಸಿ ಎಐವೈಎಫ್‌ ಪ್ರತಿಜ್ಞೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 5:49 IST
Last Updated 16 ಆಗಸ್ಟ್ 2020, 5:49 IST
ದಾವಣಗೆರೆ ಪಂಪಾಪತಿ ಭವನದ ಕಚೇರಿಯಲ್ಲಿ ಎಐವೈಎಫ್‌ನಿಂದ  ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು
ದಾವಣಗೆರೆ ಪಂಪಾಪತಿ ಭವನದ ಕಚೇರಿಯಲ್ಲಿ ಎಐವೈಎಫ್‌ನಿಂದ  ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು   

ದಾವಣಗೆರೆ: ‘ಜನರ ಹೋರಾಟದಿಂದ ಪಡೆದ ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಉಳಿಸಲು ಸದಾ ಹೋರಾಟಕ್ಕೆ ಸಿದ್ಧರಿದ್ದೇವೆ. ರೈತ ಕಾರ್ಮಿಕರು ಎಫ್‌) ಸದಸ್ಶ್ರಮದ ಮೂಲಕ ಸೃಷ್ಠಿಸಿದ ದೇಶದ ಸಂಪತ್ತು ಉಳ್ಳವರ ಪಾಲಾಗದೆ ಸಮಾನ ಹಂಚಿಕೆಗಾಗಿ ಆಗ್ರಹಿಸುತ್ತೇವೆ’ ಎಂದು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಯರು ಶನಿವಾರ ಪ್ರತಿಜ್ಞೆ ಮಾಡಿದರು.

ಪಂಪಾಪತಿ ಭವನದ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಪದಾಧಿಕಾರಿಗಳಿಗೆ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಪ್ರತಿಜ್ಞೆ ಬೋಧಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ರೈತ-ಕಾರ್ಮಿಕರ ಸ್ವಾತಂತ್ರ ಹರಣಕ್ಕೆ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡೆಯನ್ನು ವಿರೋಧಿಸಿ, ರೈತ– ಕಾರ್ಮಿಕ ಹೋರಾಟಕ್ಕೆ ಬೆಂಬಲಿಸುತ್ತೆವೆ. ಸಂವಿಧಾನ ಆಶಯಕ್ಕೆ ಬದ್ಧವಾಗಿ ಶಾಂತಿಯುತ ಚಳವಳಿಗಳ ಮೂಲಕ ರೈತ-ಕಾರ್ಮಿಕರ ಪರವಾದ ಹೋರಾಟ ನಡೆಸಿ ದೇಶದ ಸ್ವಾತಂತ್ರ್ಯದ ಆಶಯವನ್ನು ಮುಂದುವರಿಸುತ್ತೇವೆ’ ಎಂದೂ ಪ್ರತಿಜ್ಞೆ ಸ್ವೀಕರಿಸಿದರು.

ADVERTISEMENT

ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಎ. ತಿಪ್ಪೇಶಿ, ಪದಾಧಿಕಾರಿಗಳಾದ ಗದ್ದಿಗೇಶ್, ಮಂಜು ಎಚ್.ಎಂ., ಫಜಲುಲ್ಲಾ, ಇರ್ಫಾನ್, ಮಂಜು ದೊಡ್ಡಮನೆ, ಎ. ಮಂಜು, ಲೋಹಿತ್, ಮಂಜುಪಿಗ್ಮಿ, ಹನುಮಂತಪ್ಪ ಎಚ್. ಹಾಲೇಕಲ್ಲು, ಸಂತೋಷ್ ಅಫ್ರೋಜ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.