ADVERTISEMENT

ದಾವಣಗೆರೆ: ‘ಈಶ್ವರ್ ಡಿಜಿಟ್ರಾನಿಕ್ಸ್‌’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:17 IST
Last Updated 13 ಸೆಪ್ಟೆಂಬರ್ 2025, 4:17 IST
<div class="paragraphs"><p>ದಾವಣಗೆರೆಯ ಜಯದೇವ ವೃತ್ತದ ಬಳಿಯ&nbsp;ಹದಡಿ ರಸ್ತೆಯಲ್ಲಿನ ನೂತನ ‘ಎಎಸ್‌ಯುಎಸ್‌’ ಮಳಿಗೆ ‘ಈಶ್ವರ್ ಡಿಜಿಟ್ರಾನಿಕ್ಸ್‌’ ಶುಕ್ರವಾರ ಉದ್ಘಾಟನೆಗೊಂಡಿತು.</p></div>

ದಾವಣಗೆರೆಯ ಜಯದೇವ ವೃತ್ತದ ಬಳಿಯ ಹದಡಿ ರಸ್ತೆಯಲ್ಲಿನ ನೂತನ ‘ಎಎಸ್‌ಯುಎಸ್‌’ ಮಳಿಗೆ ‘ಈಶ್ವರ್ ಡಿಜಿಟ್ರಾನಿಕ್ಸ್‌’ ಶುಕ್ರವಾರ ಉದ್ಘಾಟನೆಗೊಂಡಿತು.

   

ದಾವಣಗೆರೆ: ನಗರದ ಜಯದೇವ ವೃತ್ತ ಸಮೀಪದ ಹದಡಿ ರಸ್ತೆಯಲ್ಲಿನ ನೂತನ ‘ಎಎಸ್‌ಯುಎಸ್‌’ ಮಳಿಗೆ ‘ಈಶ್ವರ್ ಡಿಜಿಟ್ರಾನಿಕ್ಸ್‌’ ಶುಕ್ರವಾರ ಉದ್ಘಾಟನೆಗೊಂಡಿತು.

ಇದು ನಗರದಲ್ಲಿ ಕಾರ್ಯಾರಂಭಗೊಂಡ ‘ಎಎಸ್‌ಯುಎಸ್‌’ನ ಮೊದಲ ವಿಶೇಷ ಮಳಿಗೆಯಾಗಿದೆ. ರಾಜ್ಯದಲ್ಲಿ 25ನೇ ಮಳಿಗೆಯಾಗಿದ್ದು, ‘ಎಎಸ್‌ಯುಎಸ್‌’ ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್‌ ಉತ್ಪನ್ನಗಳು ಲಭ್ಯವಾಗುತ್ತವೆ. ಗುಣಮಟ್ಟ, ನಾವೀನ್ಯತೆ ಮತ್ತು ವಿನ್ಯಾಸದಿಂದ ಉತ್ಪನ್ನಗಳು ಗಮನ ಸೆಳೆಯುತ್ತವೆ.

ADVERTISEMENT

‘ವಿವೋಬುಕ್, ಝೆನ್‌ಬುಕ್, ರಿಪಬ್ಲಿಕ್ ಆಫ್ ಗೇಮರ್ಸ್, ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌, ಆಲ್‌ ಇನ್‌ ಒನ್‌ ಡೆಸ್ಕ್‌ಟಾಪ್‌ ಸೇರಿ ಎಲ್ಲ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯ ಇವೆ. ₹ 39,999ರಿಂದ ₹ 4.40 ಲಕ್ಷ ಮೌಲ್ಯದ ಉತ್ಪನ್ನಗಳು ಗ್ರಾಹಕರಿಗೆ ಸಿಗುತ್ತವೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಂವಹನ ಮತ್ತು ಸಂಪರ್ಕ ಸಾಧ್ಯತೆಯನ್ನು ಸಾಕಾರಗೊಳಿಸಲಿದೆ’ ಎಂದು ‘ಎಎಸ್‌ಯುಎಸ್‌’ನ ರಾಜ್ಯ ವ್ಯವಸ್ಥಾಪಕ ಸಂತೋಷ್‌ ಮಾಹಿತಿ ನೀಡಿದರು.

‘ಈಶ್ವರ್ ಡಿಜಿಟ್ರಾನಿಕ್ಸ್‌’ ಮಾಲೀಕ ರಾಜು, ‘ಎಎಸ್‌ಯುಎಸ್‌’ ಪ್ರಾದೇಶಿಕ ವ್ಯವಸ್ಥಾಪಕ ರಾಹುಲ್‌, ವಿಭಾಗೀಯ ವ್ಯವಸ್ಥಾಪಕ ಅಮೃತ್‌, ಮಳಿಗೆ ವ್ಯವಸ್ಥಾಪಕ ಆಜಂ, ಅಮಿತ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.