ADVERTISEMENT

ಮಾಯಕೊಂಡ: ಪ್ರತಿಭಟನೆ ನಡೆಸುತ್ತಿರುವ ಸದಸ್ಯರ ಮನವೊಲಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:09 IST
Last Updated 28 ಮೇ 2025, 16:09 IST
ಮಾಯಕೊಂಡದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರ ಜತೆ ತಾ.ಪಂ. ಇಒ ರಾಮಭೋವಿ ಮಾತನಾಡಿದರು
ಮಾಯಕೊಂಡದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರ ಜತೆ ತಾ.ಪಂ. ಇಒ ರಾಮಭೋವಿ ಮಾತನಾಡಿದರು   

ಮಾಯಕೊಂಡ: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಗೆ ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ ಅವರು ಬುಧವಾರ ಭೇಟಿ ನೀಡಿ, ಪಿಡಿಒ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದರು.

ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ₹3.20 ಕೋಟಿ ಅನುದಾನ ಬಿಡುಗಡೆಯಾಗಿದೆ. ಮರು ಅಂದಾಜು ಆದ ನಂತರ ಕೆಲಸ ಪ್ರಾರಂಭಿಸಿ ಶೀಘ್ರ‌ವೇ ನೀರು ಒದಗಿಸಲಾಗುತ್ತದೆ ಎಂದು ರಾಮಭೋವಿ ಭರವಸೆ ನೀಡಿದರು.

‘ರಾಜೀವ್ ಗಾಂಧಿ ಸಬ್ ಮಿಷನ್ ಕುಡಿಯುವ ನೀರಿನ ಫಿಲ್ಟರ್ ನಿರ್ವಹಣೆಗೆ ಟೆಂಡರ್ ಆಗಿದೆ. ಗ್ರಾಮದ ರುದ್ರಭೂಮಿಯ ಅಭಿವೃದ್ಧಿಗೆ ಸಮಾಜಕಲ್ಯಾಣ ಇಲಾಖೆ ಎಸ್‌ಸಿಪಿ‌, ಟಿಎಸ್ಪಿ ಯೋಜನೆಯಿಂದ ಕೆಆರ್‌ಐಡಿಎಲ್‌ಗೆ ಹಣ ಬಿಡುಗಡೆಯಾಗಿದೆ‌. ವಾರ್ಡ್ ಸಭೆ, ಗ್ರಾಮಸಭೆ ಮತ್ತು ನಡಾವಳಿ ಆನ್‌ಲೈನ್ ಆಗಿವೆ. ಸದಸ್ಯರು ಬಯೋಮೆಟ್ರಿಕ್ ಹಾಜರಾತಿ ನೀಡಬೇಕು. ಆದ್ದರಿಂದ ಸದಸ್ಯರು ಗೊಂದಲಗಳಿಗೆ‌ ಒಳಗಾಗದೆ ಎಲ್ಲರ ಸಹಕಾರೊಂದಿಗೆ ಗ್ರಾಮದ ಅಭಿವೃದ್ದಿಗೆ ಸಹಕರಿಸಿ’ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷೆ ಸಾಕಮ್ಮ ಲಿಂಗರಾಜ್, ಉಪಾಧ್ಯಕ್ಷೆ ಶಿವಮ್ಮ ಮಲ್ಲಿಕಪ್ಪ, ಮಾಜಿ ಅಧ್ಯಕ್ಷೆ ಲತಾ ಮಲ್ಲಿಕಾರ್ಜುನ್, ಸದಸ್ಯರಾದ ಉಳ್ಳಾಗಡ್ಡೆ ಲಕ್ಷ್ಮಣ್ಣ, ಪುಷ್ಪಾ ಉಮಾಶಂಕರ್, ಗಚ್ಚಪ್ಪರ ನಾಗಪ್ಪ, ನಾಗಮ್ಮ ಬೀರಪ್ಪ, ಮಲ್ಲಿಕಾರ್ಜುನ, ಮೈತ್ರಮ್ಮ ಬಸವರಾಜಪ್ಪ, ವಗ್ಗಪ್ಪ ಮಲ್ಲಪ್ಪ, ಲಾರಿ ಬಸಣ್ಣ, ಸುನಿತಾ ಹನುಮಂತಪ್ಪ, ಸಾಕಮ್ಮ ಬೀರಪ್ಪ, ಪಿಡಿಒ ಶ್ರೀನಿವಾಸ್, ಪಿಎಸ್‌ಐ ಅಜಯ್, ಮುಖಂಡರಾದ ಎಂ.ಜಿ. ಗುರುನಾಥ್, ಬಿ.ಸಿ. ಬಸವರಾಜಪ್ಪ, ಕೈದಾಳೆ ಬಸವರಾಜಪ್ಪ, ಎಂ.ಜಿ. ಗೋಪಾಲ್, ಶಿವಣ್ಣ, ರಾಮಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.