ದಾವಣಗೆರೆ: ಆಟೊವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ಹರಿಹರ ತಾಲ್ಲೂಕಿನ ಬನ್ನಿಕೊಡು ಗ್ರಾಮದ ಪ್ರೇಮ ನೇತ್ರಮ್ಮ (32) ಮೃತರು. ಸುನೀತಾ, ಗಂಗಮ್ಮ ಹಾಗೂ ಪ್ರೇಮ ಗಾಯಗೊಂಡವರು. ಈ ನಾಲ್ವರು ಮಹಿಳೆಯರು ಗಾರ್ಮೆಂಟ್ಸ್‌ಗೆ ಆಟೊದಲ್ಲಿ ಹೋಗುತ್ತಿರುವಾಗ ಹಳೇಬಾತಿ ಸರ್ವೀಸ್ ರಸ್ತೆಯ ಬನ್ನಿಕೋಡು ಕ್ರಾಸ್‌ನಲ್ಲಿ ಆಟೊ ಚಾಲಕ ಏಕಾಏಕಿ ಆಟೊವನ್ನು ಬ್ರಿಡ್ಜ್ ಅಂಡರ್‌ಪಾಸ್‌ಗೆ ತಿರುಗಿಸಿದಾಗ ಪಲ್ಟಿಯಾಗಿದೆ. ಚಾಲಕನ ಮುಂದೆ ಕುಳಿತಿದ್ದ ನೇತ್ರಮ್ಮ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಮೃತಪಟ್ಟಿರುವುದನ್ನು ವೈದ್ಯರು ಖಾತ್ರಿಪಡಿಸಿದರು.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇರೆ ಕಡೆ ಕುಳಿತಿಕೊ ಎಂದಿದ್ದಕ್ಕೆ ಹಲ್ಲೆ
ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ಹಲ್ಲೆ ಮಾಡಿರುವ ಘಟನೆ ನಗರದ ಕಾಲೇಜೊಂದರಲ್ಲಿ ನಡೆದಿದೆ.
ಪಾಠ ಕೇಳಲು ತೊಂದರೆಯಾಗುತ್ತದೆ ಬೇರೆ ಕಡೆ ಕುಳಿತಿಕೊ ಎಂದು ಹೇಳಿದ್ದು, ಏನು ಮಾತನಾಡದೇ ಕುಳಿತಿದ್ದ ಆ ವಿದ್ಯಾರ್ಥಿ ಪಾಠ ಮುಗಿದು ಉಪನ್ಯಾಸಕರು ಹೊರಗಡೆ ಹೋದ ಬಳಿಕ ಕಬ್ಬಿಣದ ರಾಡಿನಿಂದ ಆ ವಿದ್ಯಾರ್ಥಿಯ ತಲೆಗೆ ಹೊಡೆದಿದ್ದಾನೆ. ಬಳಿಕ ಮುಂದೆ ತಿರುಗಿದಾಗ ಕಣ್ಣಿನ ಕೆಳಭಾಗಕ್ಕೂ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾನೆ.
ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.