ADVERTISEMENT

ರೈಲಿನಲ್ಲಿ ಬಿಟ್ಟು ಹೋಗಿದ್ದ ಒಡೆವಗಳಿದ್ದ ಬ್ಯಾಗ್‌ ವಾರಸುದಾರರಿಗೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 5:09 IST
Last Updated 12 ಆಗಸ್ಟ್ 2021, 5:09 IST

ದಾವಣಗೆರೆ: ಪ್ರಯಾಣಿಕರೊಬ್ಬರು ರೈಲಿನಲ್ಲಿ ಮರೆತು ಬಿಟ್ಟು ಹೋಗಿದ್ದ 60 ಗ್ರಾಂ ಚಿನ್ನಾಭರಣ, ನಗದು, ಬಟ್ಟೆ ಇದ್ದ ಬ್ಯಾಗನ್ನು ದಾವಣಗೆರೆ ರೈಲ್ವೆ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ರುಕ್ಯಾಬಾನು ಮುಲ್ಲಾ ಎಂಬ ಮಹಿಳೆ ಪ್ರಯಾಣಿಸಿದ್ದರು. ರಾಣಬೆನ್ನೂರಿನಲ್ಲಿ ಇಳಿಯುವ ಅವಸರದಲ್ಲಿ ನಗದು, ಬಟ್ಟೆ, ಚಿನ್ನಾಭರಣಗಳಿದ್ದ ಬ್ಯಾಗನ್ನು ಮರೆತಿದ್ದರು. ಬಳಿಕ ನೆನಪಾಗಿ ರಾಣೆಬೆನ್ನೂರು ರೈಲ್ವೆ ಪೊಲೀಸರಿಗೆ ಸೀಟು ನಂಬರ್‌ ಸಹಿತ ಮಾಹಿತಿ ನೀಡಿದ್ದರು. ರಾಣೆಬೆನ್ನೂರಿನಿಂದ ದಾವಣಗೆರೆ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ರೈಲು ಹರಿಹರದಿಂದ ದಾವಣಗೆರೆಗೆ ಬರುತ್ತಿದ್ದಂತೆ ರುಕ್ಯಾಬಾನು ಕುಳಿತಿದ್ದ ಸೀಟುನಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಬಳಿಕ ವಾರಸುದಾರರಿಗೆ ಮಾಹಿತಿ ನೀಡಿದರು. ರುಕ್ಯಬಾನು ಮತ್ತು ಕುಟುಂಬದವರು ದಾವಣಗೆರೆಗೆ ಬಂದು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿ ಒಡೆವೆಗಳಿದ್ದ ಬ್ಯಾಗ್‌ ಒಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.