ನ್ಯಾಮತಿ: ತಾಲ್ಲೂಕಿನ ಶಿವಮೊಗ್ಗ-ಹೊನ್ನಾಳಿ ಹೆದ್ದಾರಿಯ ಕುರುವ ಹಳ್ಳ ದಿಬ್ಬದ ಬಳಿ ಶುಕ್ರವಾರ ಆಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಆಲ್ಕೊಳ ನಿವಾಸಿ ರಾಡ್ಲಿ ಫ್ರಾನ್ಸಿಸ್ ಡ್ರೂಮ್ (53) ಮೃತಪಟ್ಟವರು. ಅತಿ ವೇಗವಾಗಿ ವಾಹನ ಚಲಾಯಿಸಿದ ಕಾರಣ ಅಪಘಾತವಾಗಿದೆ ಎಂದು ಅವರ ಪತ್ನಿ ಡಯನಾ ಡ್ರೂಮ್ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.