ADVERTISEMENT

ಕೋವಿಡ್‌ ಸ್ಪೆಷಲ್‌ ಆಸ್ಪತ್ರೆಯಾಗಿ ಸಿ.ಜಿ. ಆಸ್ಪತ್ರೆ

ಮೂರನೇ ಹಂತ ತಲುಪಿದರೂ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಲು ಕ್ರಮ: ಜಿಲ್ಲಾಧಿಕಾರಿ

ಬಾಲಕೃಷ್ಣ ಪಿ.ಎಚ್‌
Published 29 ಮಾರ್ಚ್ 2020, 20:00 IST
Last Updated 29 ಮಾರ್ಚ್ 2020, 20:00 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗಾಗಿಯೇ ವಿಶೇಷ ಆಸ್ಪತ್ರೆ ಎಂದು ಪರಿಗಣಿಸಿ ಮಾರ್ಚ್‌ 30ರಿಂದ ಮೀಸಲಾಗಲಿದೆ. ಅಲ್ಲಿನ ಒಪಿಡಿ ಹಳೇ ದಾವಣಗೆರೆಯಲ್ಲಿರುವ ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಗೊಳ್ಳಲಿದೆ.

ನೋವೆಲ್‌ ಕೊರೊನಾ ವೈರಸ್‌ ಸೋಂಕು ಮೂರನೇ ಹಂತಕ್ಕೆ ತಲುಪಿದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಹೇಗೆ ಸಜ್ಜಾಗಿದೆ ಎಂಬ ಬಗ್ಗೆ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಅವರು ಹೇಳಿದ್ದಿಷ್ಟು..

ಒಂದು ದಿವಸಕ್ಕೆ ನೂರು ರೋಗಿಗಳು ಬಂದರೆ ಹೇಗೆ ಕಾರ್ಯನಿರ್ವಹಿಸಬೇಕು ಎಂದು ತಯಾರಿ ಮಾಡಿಕೊಳ್ಳಲಾಗಿದೆ. ನಾಲ್ಕು ಶಿಫ್ಟ್‌ ಮಾಡಿದರೆ ಚಿಕಿತ್ಸೆ, ಆರೈಕೆ ನೀಡಲು ಎಷ್ಟು ಮಂದಿ ಬೇಕು? ಮೂರು ಶಿಫ್ಟ್ ಮಾಡಿದರೆ ಎಷ್ಟು ಮಂದಿ ಬೇಕು? ಎಂಬುದನ್ನು ಪಟ್ಟಿ ಮಾಡಲಾಗಿದೆ.

ADVERTISEMENT

ಪ್ರತ್ಯೇಕ ಐಸೊಲೇಶನ್‌ ಆಸ್ಪತ್ರೆ, ಐಸೊಲೇಶನ್‌ ಸೆಂಟರ್‌, ಫಿವರ್‌ ಕ್ಲಿನಿಕ್‌, ಕೋವಿಡ್‌ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಐದು ಕೊಠಡಿಗಳು ಇರುವ ಶಾಲೆಗಳು ಫಿವರ್‌ ಕ್ಲಿನಿಕ್‌ಗಳಾಗಿ ಕಾರ್ಯನಿರ್ವಹಿಸಲಿವೆ. ಜಿಲ್ಲೆಯಲ್ಲಿ ಸದ್ಯಕ್ಕೆ 12 ಫಿವರ್‌ ಕ್ಲಿನಿಕ್‌ಗಳಾಗಿ ಕಾರ್ಯನಿರ್ವಹಿಸಲಿವೆ.

ಸೂಪರ್‌ವೈಸ್‌ಡ್‌ ಐಸೊಲೇಶನ್‌ ಆಸ್ಪತ್ರೆಗಳಾಗಿ ಮೊರಾರ್ಜಿ ರೆಸಿಡೆನ್ಶಿಯಲ್‌ ಸ್ಕೂಲ್‌, ರಾಣಿ ಚನ್ನಮ್ಮ ರೆಸಿಡೆನ್ಶಿಯಲ್‌ ಸ್ಕೂಲ್‌ಗಳನ್ನು ಬಳಕೆ ಮಾಡಲು ತಯಾರಿ ನಡೆಸಲಾಗಿದೆ. ಸದ್ಯಕ್ಕೆ ಸೂಪರ್‌ವೈಸ್‌ಡ್‌ ಐಸೊಲೇಶನ್‌ ಸೆಂಟರ್‌ಗಳಾಗಿ ಬಾಪೂಜಿ ಆಸ್ಪತ್ರೆ, ಬಾಪೂಜಿ ಕ್ಯಾನ್ಸರ್‌ ಆಸ್ಪತ್ರೆ, ಬಾಪೂಜಿ ನರ್ಸಿಂಗ್‌ ಸ್ಕೂಲ್‌, ತಪೋವನ, ಎಸ್‌ಎಸ್‌ಐಎಂಗಳು ಕಾರ್ಯನಿರ್ವಹಿಸಲಿವೆ.

ನಾಳೆಯೇ 70 ಪ್ರಕರಣಗಳು ಬಂದರೂ ಸಮರ್ಥವಾಗಿ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ತಯಾರಿದೆ. ಅದಕ್ಕಾಗಿ 50 ಬೆಡ್‌ಗಳು, 20 ಐಸಿಯು ಮೀಸಲಿಡಲಾಗಿದೆ.

ಕೆಪಿಎಂಇಯಲ್ಲಿ ಜಿಲ್ಲೆಯ 743 ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲ ತಜ್ಞರನ್ನು ಪಟ್ಟಿ ಮಾಡಲಾಗಿದೆ. ಲ್ಯಾಬ್‌ ಟೆಕ್ನಿಶಿಯನ್ಸ್‌, ಪ್ಯಾರಾ ಮೆಡಿಕಲ್‌ ಸ್ಟಾಫ್‌, ನರ್ಸ್‌ಗಳ ಪಟ್ಟಿ ಇದೆ. ಕಳೆದ ಐದು ವರ್ಷಗಳಲ್ಲಿ ನಿವೃತ್ತರಾದ ತಜ್ಞ ವೈದ್ಯರು, ನರ್ಸ್‌, ಲ್ಯಾಬ್‌ ಟೆಕ್ನಿಶಿಯನ್‌ಗಳನ್ನು ಕೂಡ ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ಮೂರನೇ ಹಂತಕ್ಕೆ ತಲುಪಿದರೆ ಅವರನ್ನೆಲ್ಲ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಇಂದಿನಿಂದ ಟೆಲಿ ಮೆಡಿಸಿನ್‌ ಅನುಷ್ಠಾನ

ತಜ್ಞ ವೈದ್ಯರ ದೂರವಾಣಿ ಸಂಖ್ಯೆಯನ್ನು ನಾಳೆಯಿಂದ ನೀಡಲಾಗುವುದು. ಅವರು ದಿನದ ನಾಲ್ಕು ತಾಸು ಸಾರ್ವಜನಿಕರೊಂದಿಗೆ ದೂರವಾಣಿ ಜತೆ ಸಂವಹನ ಮಾಡುತ್ತಾರೆ. ಆ ನಾಲ್ಕು ತಾಸು ಸಾರ್ವಜನಿಕರು ಯಾವುದೇ ವಿಷಯಕ್ಕೆ ಫೋನ್‌ ಮಾಡಿ ಸಲಹೆ ತೆಗೆದುಕೊಳ್ಳಬಹುದು. ವೈದ್ಯರು ರೋಗಗಳ ಬಗ್ಗೆ ತಿಳಿದುಕೊಂಡು ಔಷಧಗಳನ್ನು ಸೂಚಿಸುತ್ತಾರೆ. ಆ ಔಷಧಗಳನ್ನು ಸ್ಥಳೀಯ ಮೆಡಿಕಲ್‌ಗಳಿಗೆ ಹೋಗಿ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.