
ಜಗಳೂರು: ಪಟ್ಟಣದಲ್ಲಿ ಛಲವಾದಿ ಸಮುದಾಯ ಭವನವನ್ನು ಶೀಘ್ರವೇ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರವನಿತೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸಮಾಜಕಲ್ಯಾಣ ಸಚಿವ ಎಚ್.ಸಿ ಮಹಾದೇವಪ್ಪ ಅನುದಾನ ಮಂಜೂರು ಮಾಡಿದ್ದಾರೆ ಎಂದರು.
ಒನಕೆ ಓಬವ್ವಳ ಸ್ವಾಮಿನಿಷ್ಠೆ, ಶೌರ್ಯ ಈಗಿನ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು. ಪುರುಷರ ಸಾಮರ್ಥ್ಯಕ್ಕೆ ಸರಿಸಮಾನವಾಗಿ ಹೋರಾಟ ನಡೆಸಿ ಇತಿಹಾಸದ ಪುಟದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಸರ್ಕಾರದಿಂದ ಆಚರಿಸುವ ಮಹನೀಯರ ಜಯಂತಿಗಳು ಜಾತ್ಯತೀತವಾಗಬೇಕಿದೆ. ಪಾಳೇಗಾರರು ಹಾಗೂ ಒನಕೆ ಓಬವ್ವಳ ಇತಿಹಾಸವನ್ನು ವಿದ್ಯಾರ್ಥಿ, ಯುವಜನರು ತಿಳಿಯಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ ಪಾಲಯ್ಯ ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ, ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ, ಛಲವಾದಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ.ನಿಜಲಿಂಗಪ್ಪ, ಗೌರವಾಧ್ಯಕ್ಷ ಸಿ.ಲಕ್ಷ್ಮಣ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಬಿ.ಮಹೇಶ್ವರಪ್ಪ, ನಾಗಲಿಂಗಪ್ಪ, ವೀರಸ್ವಾಮಿ, ಧನ್ಯಕುಮಾರ್, ಮಾದಿಹಳ್ಳಿ ಮಂಜಪ್ಪ, ಎನ್.ಟಿ. ಎರ್ರಿಸ್ವಾಮಿ, ಬಸವರಾಜ್, ಶಾಂತಮ್ಮ, ಅಜ್ಜಪ್ಪ ನಾಡಿಗರ್, ಬಂಗ್ಲೆ ಫರ್ ವೀಜ್, ಶಂಭುಲಿಂಗಪ್ಪ, ಕುಬೇಂದ್ರಪ್ಪ, ಸಣ್ಣಸೂರಯ್ಯ, ತಿಮ್ಮಾರೆಡ್ಡಿ, ಪ್ರಕಾಶರೆಡ್ಡಿ, ಶಿವನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.