ಹರಪನಹಳ್ಳಿ: ತಾಲ್ಲೂಕಿನ ಕಡತಿ, ವಟ್ಲಹಳ್ಳಿ ಸಮೀಪದಲ್ಲಿ ಕಂಡುಬಂದ ಚಿರತೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಗ್ರಾಮಸ್ಥರು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಗ್ರಾಮಗಳ ಸುತ್ತಮುತ್ತ ಎರಡು ದಿನಗಳ ಹಿಂದೆ ಚಿರತೆ ಕಂಡುಬಂದಿದ್ದು ಕೃಷಿ ಕೆಲಸಕ್ಕೆ ತೆರಳುವ ಜನರು ಆತಂಕಗೊಂಡಿದ್ದಾರೆ. ಈ ಹಿಂದೆಯೂ ಚಿರತೆ ಸಮೀಪದ ಹೊಲಗಳಲ್ಲಿ ದಾಳಿ ಮಾಡಿ, ಕುರಿ, ಮೇಕೆ ತಿಂದು ಹಾಕಿತ್ತು. ಆದಕಾರಣ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.