ADVERTISEMENT

ಮಗು ಮಾರಾಟ ಹೆತ್ತವರಿಗೂ, ಪಡೆದವರಿಗೂ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:15 IST
Last Updated 9 ಅಕ್ಟೋಬರ್ 2019, 20:15 IST
   

ದಾವಣಗೆರೆ: ಮೂರು ದಿನಗಳ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಹೆತ್ತವರಿಗೆ ಮತ್ತು ಮಗುವನ್ನು ಖರೀದಿ ಮಾಡಿದ ದಂಪತಿಗೆ 7 ವರ್ಷ ಜೈಲು ಶಿಕ್ಷೆ, ತಲಾ ₹ 25 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪಿತ್ತಿದೆ.

ಇಲ್ಲಿನ ಬೀಡಿ ಲೇಔಟ್‌ ನಿವಾಸಿ ಸಿಖಂದರ್‌ ಅವರ ಪತ್ನಿ ಶಬೀನಾ 2017ರ ಡಿಸೆಂಬರ್‌ 19ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಮೂರು ದಿನಗಳ ಬಳಿಕ ಆ ಮಗುವನ್ನು ಅಜಾದ್‌ನಗರದ ಹಫೀಜಾ ಬಾನು–ಮುಜೀಬುಲ್ಲಾ ದಂಪತಿಗೆ ₹ 20 ಸಾವಿರಕ್ಕೆ ಮಾರಾಟ ಮಾಡಿದ್ದರು.

ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪರಿಶೀಲನೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ವರದಿ ನೀಡಿದ್ದರು. ಅವರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆಗಿನ ಪಿಎಸ್‌ಐ ನಾಗಮ್ಮ ಹಾಗೂ ದೇವರಾಜ್‌ ಟಿ.ವಿ. ತನಿಖೆ ಮಾಡಿ ದೋಷಾರೋಪ ‍ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಅಂಬಾದಾಸ್‌ ಕುಲಕರ್ಣಿ ಜಿ. ಆರೋಪ ಸಾಬೀತಾಗಿದೆ ಎಂದು ತೀರ್ಪಿತ್ತಿದ್ದಾರೆ. ಸರ್ಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌ ವಾದಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.