ದಾವಣಗೆರೆ: ನಗರದಲ್ಲಿ ಭಾನುವಾರ ನಡೆದ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದ ಕಲಾವಿದರನ್ನು ಪ್ರೋತ್ಸಾಹಿಸಲು ಬಹುಮಾನ ಘೋಷಿಸಲಾಗಿದೆ.
ಹಿರಿಯರ ವಿಭಾಗ:
ವೀರೇಶ್ ಟಿ.ಎಂ. ಅವರ ‘ಕುದುರೆ ಮತ್ತು ಸ್ತ್ರೀ’ ಚಿತ್ರ ಹಾಗೂ ಕೃಷ್ಣ ಜಿ.ಎಸ್. ಅವರ ‘ನಟರಾಜ’ ಚಿತ್ರ (ಪ್ರಥಮ). ಶಿವಪ್ಪ ಕೋಥ್ ಅವರ ‘ಗಿಳಿಗಳು’ ಹಾಗೂ ಸಿದ್ದನಗೌಡ ಎಸ್. ಗಬಸಾವಳಗಿ ಅವರ ‘ವೀಣಾ ಪಾಣಿ’ ಚಿತ್ರ (ದ್ವಿತೀಯ). ರವಿ ಎಲ್. ಅವರ ‘ವಿಷ್ಣು’ ಮಿನಿಯೇಚರ್ ಚಿತ್ರ (ತೃತೀಯ).
ವಿದ್ಯಾರ್ಥಿ ವಿಭಾಗ: ಸಾಯಿ ಬ್ರಷ್ ಪ್ಲೇ ಅವರ ಒಟ್ಟು ಕಲಾಕೃತಿಗಳು ಹಾಗೂ ಚಿದಾನಂದ ಅವರ ‘ಸಾಲು ಮರದ ತಿಮ್ಮಕ್ಕ’ ಚಿತ್ರ (ಪ್ರಥಮ). ಸತೀಶ್ ಬಿರಾದಾರ್ ಅವರ ಒಟ್ಟು ಕಲಾಕೃತಿಗಳು ಹಾಗೂ ವಿಕಾಸ್ ಆರ್. ಅವರ ಒಟ್ಟು ಕಲಾಕೃತಿಗಳು (ದ್ವಿತೀಯ). ಸ್ನೇಹಾ ಪಬ್ಲಿಕ್ ಸ್ಕೂಲ್ ಅವರ ಒಟ್ಟು ಕಲಾಕೃತಿಗಳು (ತೃತೀಯ).
ಉತ್ತಮ ಸ್ಟಾಲ್ ನಿರ್ವಹಣೆ:
ಸ್ಟಾಲ್ ನಂ. 36 ಅರಳಷ್ಟು ದೇವರಾಜ್, ಕೊಯಮತ್ತೂರು ಹಾಗೂ ಸ್ಟಾಲ್ ನಂ. 40 ಪರಮೇಶ್ವರಪ್ಪ ಹುಲಮನಿ, ರಟ್ಟಿಹಳ್ಳಿ (ಪ್ರಥಮ). ಸ್ಟಾಲ್ ನಂ. 48 ಮೌನೇಶ್ ಬಡಿಗೇರ್, ದಾವಣಗೆರೆ ಹಾಗೂ ಸ್ಟಾಲ್ ನಂ. 27 ಶ್ರೀಶೈಲ ಭಜಂತ್ರಿ, ಹೂವಿನ ಹಿಪ್ಪರಗಿ (ದ್ವಿತೀಯ). ಸ್ಟಾಲ್ ನಂ. 8 ಮಾಧವಿ ದತ್ತಾತ್ರೇಯ ಗೋಳ್ಳರ್, ಇಚಲಕರಂಜಿ, ಸ್ಟಾಲ್ ನಂ. 96 ಮೇಘಾಶ್ರೀ ಎಂ.ಎನ್. ದಾವಣಗೆರೆ ಹಾಗೂ ಸ್ಟಾಲ್ ನಂ. 69 ನೀತಾ ಹರ್ಷ ಗೌಡರ್, ದಾವಣಗೆರೆ (ತೃತೀಯ).
ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಹಾಗೂ ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಅವರು ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.