ಚನ್ನಗಿರಿ: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಚರ್ಚ್ ಅನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‌ಮಸ್ ಟ್ರೀ ತಯಾರಿಸಿ ಯೇಸುಕ್ರಿಸ್ತನ ಜೀವನದ ವಿವಿಧ ರೀತಿಯ ಚಿತ್ರಗಳನ್ನು ಇಡಲಾಗಿತ್ತು.
ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಫಾದರ್ ಜಾರ್ಜ್ ವಿನ್ಸೆಂಟ್ ಲೋಬೋ ಮಾತನಾಡಿ, ‘ಜನರನ್ನು ಪಾಪದಿಂದ ಮುಕ್ತಿಗೊಳಿಸಲು ಮತ್ತು ಜನರಿಗೆ ಒಳಿತು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು. ಜನರನ್ನು ಪಾಪದಿಂದ ಮುಕ್ತಿಗೊಳಿಸುವ ಹೋರಾಟದಲ್ಲಿ ಯೇಸುಕ್ರಿಸ್ತ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಜಗತ್ತಿಗೆ ಪ್ರೀತಿ, ಶಾಂತಿಯನ್ನು ಸಾರಿದ ಯೇಸುಕ್ರಿಸ್ತನನ್ನು ಈ ದಿನ ವಿಶೇಷವಾಗಿ ಸ್ಮರಣೆ ಮಾಡಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.