ನ್ಯಾಮತಿ: ಪಟ್ಟಣದ ಕುಂಬಾರ ಬೀದಿಯಲ್ಲಿ ಅಂದಾಜು ಎರಡು ಶತಮಾನಗಳಿಂದ ಅಮ್ಮನ ಮರದ ದೇವಿ ಮರವೆಂದೇ ಹೆಸರು ಪಡೆದಿರುವ ಬೇವಿನ ಮರ ಈಚೆಗೆ ಪೂರ್ಣವಾಗಿ ಒಣಗಿದ್ದರಿಂದ ಅರಣ್ಯ ಇಲಾಖೆ ಅನುಮತಿಯೊಂದಿಗೆ ಶುಕ್ರವಾರ ದೇವಸ್ಥಾನ ಸಮಿತಿಯವರು ತೆರವುಗೊಳಿಸಿದರು.
ಎರಡು ಶತಮಾನಗಳಷ್ಟು ಹಳೆಯದಾದ ಮರ ಒಣಗಿದ್ದರಿಂದ ಮಳೆ, ಗಾಳಿಗೆ ಸಿಲುಕಿ ರೆಂಬೆ ಕೊಂಬೆಗಳು ಬೀಳಬಹುದು ಎಂದು ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಅನುಮತಿ ಪಡೆದು, ಬೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.
‘ನಮ್ಮ ಪೂರ್ವಜರ ಕಾಲದಿಂದಲೂ ಈ ಮರವನ್ನು ದೇವಿಯ ಸ್ವರೂಪ ಎಂದು ಪೂಜಿಸುತ್ತ ಬಂದಿದ್ದೆವು. ಸಾಮೂಹಿಕ ವಿವಾಹ, ವಾರ್ಷಿಕೋತ್ಸವ ಒಳಗೊಂಡಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದೆವು. ಈಗ ಈ ಮರ ಕತ್ತರಿಸುವುದು ತುಂಬಾ ಖೇದವಾಗಿದೆ’ ಎಂದು ಅಮ್ಮನಮರದ ಸೇವಾ ಟ್ರಸ್ಟ್ ಅಧ್ಯಕ್ಷ ಶಂಕರಪ್ಪ ಹೇಳಿದರು.
ಹೊಸಮನೆ ಪದಾಧಿಕಾರಿಗಳಾದ ಎಚ್.ಕೆ.ಚನ್ನೇಶಪ್ಪ, ಎಚ್. ಮಲ್ಲಿಕಾರ್ಜುನ, ಎನ್.ಎಂ. ಮಲ್ಲೇಶ, ಶಿಕ್ಷಕ ಪುಟ್ಟಪ್ಪ, ಎಂ.ಕರಿಬಸವ ಹಾಗೂ ಮಹಿಳಾ ಸಂಘದವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.