ADVERTISEMENT

‘ಆತ್ಮವಿಶ್ವಾಸ, ಸದೃಢ ಮನಸ್ಸು ಯಶಸ್ಸಿನ ಆಯುಧಗಳು’: ಮಂಜುನಾಥ್ ಕುರ್ಕಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 3:04 IST
Last Updated 2 ಆಗಸ್ಟ್ 2021, 3:04 IST
ದಾವಣಗೆರೆಯ ಚೈತನ್ಯ ಹೈ-ಟೆಕ್ ವಾಣಿಜ್ಯ ಮತ್ತು ನಿರ್ವಹಣಾ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಉದ್ಘಾಟಿಸಿದರು.
ದಾವಣಗೆರೆಯ ಚೈತನ್ಯ ಹೈ-ಟೆಕ್ ವಾಣಿಜ್ಯ ಮತ್ತು ನಿರ್ವಹಣಾ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಉದ್ಘಾಟಿಸಿದರು.   

ದಾವಣಗೆರೆ: ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಯಶಸ್ಸು ಪಡೆಯಲು ಜ್ಞಾನವೇ ಶಕ್ತಿಯಾಗಿದ್ದು, ಜ್ಞಾನ ಮತ್ತು ಕೌಶಲ ಹೆಚ್ಚಿಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮವಿಶ್ವಾಸ ಮತ್ತು ಸದೃಢ ಮನಸ್ಸು ಯಶಸ್ಸಿನ ಆಯುಧಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಅಭಿಪ್ರಾಯಪಟ್ಟರು.

ನಗರದ ಚೈತನ್ಯ ಹೈ-ಟೆಕ್ ವಾಣಿಜ್ಯ ಮತ್ತು ನಿರ್ವಹಣಾ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವಾಗ ನಿಮ್ಮ ಆತ್ಮವಿಶ್ವಾಸದ ಕೊರತೆಯಾಗುತ್ತದೆಯೋ ಅಂದೇ ನಿಮ್ಮ ಅಂತ್ಯವಾಗುತ್ತದೆ. ನೀವು ದುರ್ಗಮದ ಹಾದಿಯಲ್ಲಿ ಸಾಗಿ ವಿಶ್ವವೇ ಬೆರಗಾಗುವಂತೆ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಂಸ್ಥೆ ಅಧ್ಯಕ್ಷ ಅಭಿಷೇಕ್ ಬೇತೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮುಂದೆಯೂ ಇಂತಹ ಹೆಸರಾಂತ ಕಂಪನಿಗಳ ಸಹಭಾಗಿತ್ವದಲ್ಲಿ ಇಂತಹ ಮೇಳ ಆಯೋಜಿಸಲಾಗುವುದು’ ಎಂದರು.

ಕಾರ್ಯದರ್ಶಿ ಪ್ರೀತಿ, ಐಸಿಐಸಿಐ ಕರ್ನಾಟಕ ರಿಕ್ರೂಟ್ ಮೆಂಟ್ ಮ್ಯಾನೇಜರ್ ಸುರೇಂದ್ರ ಇದ್ದರು.
ಕ್ರಿಯೇಟಿವ್ ಎಂಜಿನಿಯರ್ಸ್ ಕಂಪನಿ, ಐಸಿಐಸಿಐ ಬ್ಯಾಂಕ್, ಡಿಪ್ ಸನ್ಸ್, ಸ್ಟಾರ್ ಹೆಲ್ತ್ ಇನ್ಷುರೆನ್ಸ್ ಕಂಪನಿಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.