ADVERTISEMENT

ದಾವಣಗೆರೆಯಲ್ಲಿ 107 ಮಂದಿಗೆ ಕೊರೊನಾ: ಒಬ್ಬರ ಸಾವು

101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 16:15 IST
Last Updated 28 ಸೆಪ್ಟೆಂಬರ್ 2020, 16:15 IST
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ   

ದಾವಣಗೆರೆ: ಜಿಲ್ಲೆಯಲ್ಲಿ 107 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಒಬ್ಬರು ಮೃತಪಟ್ಟಿದ್ದಾರೆ.

ಹರಿಹರ ತಾಲ್ಲೂಕು ಸಾರಥಿಯ 50 ವರ್ಷದ ಪುರುಷ ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಮೃತಪಟ್ಟರು.

ಒಂದು ವರ್ಷದ ಮಗು ಸೇರಿ ನಾಲ್ವರು ಬಾಲಕರು, ಮೂವರು ಬಾಲಕಿಯರು, ಐವರು ವೃದ್ಧೆಯರು ಮತ್ತು 12 ಮಂದಿ ವೃದ್ಧರು ಸೋಂಕಿಗೆ ಒಳಗಾಗಿದ್ದಾರೆ.

ADVERTISEMENT

ದಾವಣಗೆರೆ ತಾಲ್ಲೂಕಿನ 44 ಮಂದಿಗೆ ಕೊರೊನಾ ಬಂದಿದೆ. ತೋಳಹುಣೆ, ಹಳೇಬಾತಿ, ಈಚಘಟ್ಟ, ಕೆಂಚಮ್ಮನಹಳ್ಳಿ ಹೀಗೆ ಆರು ಮಂದಿ ಗ್ರಾಮೀಣ ಪ್ರದೇಶದವರು. ಉಳಿದವರು ಪಾಲಿಕೆ ವ್ಯಾಪ್ತಿಯವರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ, ಮೂವರು ಪೊಲೀಸರಿಗೂ ಕೊರೊನಾ ಬಂದಿದೆ.

ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 29, ಹರಿಹರ ತಾಲ್ಲೂಕಿನ 19, ಜಗಳೂರು ತಾಲ್ಲೂಕಿನ 14, ಚನ್ನಗಿರಿ ತಾಲ್ಲೂಕಿನ ಒಬ್ಬರಿಗೆ ಸೋಂಕು ತಗುಲಿದೆ.

101 ಮಂದಿ ಸೋಮವಾರ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 12 ವೃದ್ಧರು, ಏಳು ಮಂದಿ ವೃದ್ಧೆಯರು, ಮೂವರು ಬಾಲಕರು, ಮೂವರು ಬಾಲಕಿಯರು ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 15,634 ಮಂದಿಗೆ ಕೊರೊನಾ ಬಂದಿದೆ. 12,584 ಮಂದಿ ಗುಣಮುಖರಾಗಿದ್ದಾರೆ. 241 ಮಂದಿ ಮೃತಪಟ್ಟಿದ್ದಾರೆ. 2807 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.