ADVERTISEMENT

ಶ್ರೀಗಂಧ ಕಳವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 7:54 IST
Last Updated 4 ಸೆಪ್ಟೆಂಬರ್ 2023, 7:54 IST
ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸಿ ಶ್ರೀಗಂಧ ವಶಪಡಿಸಿಕೊಂಡ ಪೊಲೀಸರ ತಂಡ
ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸಿ ಶ್ರೀಗಂಧ ವಶಪಡಿಸಿಕೊಂಡ ಪೊಲೀಸರ ತಂಡ   

ಸಂತೇಬೆನ್ನೂರು: ಸಮೀಪದ ಸೂಳೆಕೆರೆ ಬಳಿ ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸಿರುವ ಪೊಲೀಸರು ₹ 6.50 ಲಕ್ಷ ಮೌಲ್ಯದ 61 ಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಗಾಳಿಹಳ್ಳಿ ಗ್ರಾಮದ ಇಸ್ಮಾಯಿಲ್, ಭದ್ರಾವತಿ ತಾಲ್ಲೂಕಿನ ದಡಂಗಟ್ಟೆ ನಿವಾಸಿ ಜಬೀವುಲ್ಲಾ, ಶಿವಮೊಗ್ಗ ನಿವಾಸಿ ಹೈದರ್ ಖಾನ್ ಬಂಧಿತರು. ಅವರಿಂದ ಕೃತ್ಯಕ್ಕೆ ಬಳಸಿದ 1 ಬೈಕ್, 2 ಗರಗಸ, 1 ಮಚ್ಚು, 1 ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

ಮೂವರ ವಿರುದ್ಧ ಚನ್ನಗಿರಿಯಲ್ಲಿ 3 ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟ 7 ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಸಿಪಿಐ ನಿಂಗನಗೌಡ ನೆಗಳೂರ್ ನೇತೃತ್ವದಲ್ಲಿ ಪಿಎಸ್‌ಐ ರೂಪಾ ತೆಂಬದ್, ಸಿಬ್ಬಂದಿ ಸತೀಶ್, ಎಂ. ರುದ್ರೇಶ್, ಉಮೇಶ್ ರೆಡ್ಡಿ, ಆಂಜನೇಯ, ರಾಘವೇಂದ್ರ, ಪ್ರವೀಣ ಗೌಡ, ನಾಗಭೂಷಣ, ಇಬ್ರಾಹಿಂ ಮನ್ನಾಖಾನ್, ಪ್ರಕಾಶ್, ಬೀರೇಶ್ ಪುಟ್ಟಕ್ಕನವರ, ರಘು ಲೋಕೇಶ್ ತಂಡ ಕಾರ್ಯಾಚರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.