ADVERTISEMENT

ದಾವಣಗೆರೆ | ಸಿಂಥೆಟಿಕ್ ಡ್ರಗ್ಸ್ ಪೂರೈಕೆ: ಉದ್ಯಮಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 17:05 IST
Last Updated 17 ಜನವರಿ 2026, 17:05 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ದಾವಣಗೆರೆ: ಸಿಂಥೆಟಿಕ್ ಡ್ರಗ್ಸ್‌ ಪೂರೈಕೆ ಆರೋಪದಡಿ ಉದ್ಯಮಿ ಶಿವರಾಜ್ ಅವರನ್ನು ಇಲ್ಲಿನ ವಿದ್ಯಾನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ADVERTISEMENT

ಅಂತರರಾಜ್ಯ ಗಾಂಜಾ ವಹಿವಾಟು ನಡೆಸುತ್ತಿದ್ದ ಆರೋಪದಡಿ ಈಚೆಗೆ ಉದ್ಯಮಿ ವೇದಮೂರ್ತಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಶಿವರಾಜ್ ಅವರನ್ನೂ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿದೆ. 

‘ಎಸ್‌.ಎಸ್‌.ಲೇಔಟ್‌ ನಿವಾಸಿಯಾದ ಶಿವರಾಜ್ ಹಿಂದೆ ಆರ್‌ಟಿಒ ಕಚೇರಿಯಲ್ಲಿ ಏಜೆಂಟ್‌ ಆಗಿದ್ದರು. ಬಂಧನದ ವೇಳೆ ಮಾದಕ ವಸ್ತು ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಶಿವರಾಜ್, ಪ್ರಭಾವಿ ಎಂದು ತೋರಿಸಿಕೊಳ್ಳಲು ಪ್ರಭಾವಿಗಳು, ಪೊಲೀಸರ ಜೊತೆ ನಿಕಟ ಸಂಪರ್ಕ ಹೊಂದಿದ್ದರು’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.