ADVERTISEMENT

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:23 IST
Last Updated 1 ಅಕ್ಟೋಬರ್ 2020, 16:23 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರ ಯೂನಿಯನ್‌ ಒಕ್ಕೂಟದ ಸದಸ್ಯರು ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರ ಯೂನಿಯನ್‌ ಒಕ್ಕೂಟದ ಸದಸ್ಯರು ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರ ಯೂನಿಯನ್‌ಗಳ ಒಕ್ಕೂಟದಿಂದ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೊರೊನಾದಿಂದ ನಿವೃತ್ತ ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಪಿಂಚಣಿಯಾಗಿ ತಿಂಗಳಿಗೆ ₹ 6000 ನಿಗದಿಪಡಿಸಬೇಕು.ಜನವರಿ 2020ರಿಂದ ಆಗಸ್ಟ್ 2020ರ ವರೆಗೆ ಯಾವುದೇ ಮಾಹಿತಿ ನೀಡದೆ ಅರ್ಹ ಫಲಾನುಭವಿಗಳಿಗೆ ಸ್ಥಗಿತಗೊಳಿಸಿರುವಪಿಂಚಣಿ‌ ನೀಡಬೇಕು. ಕೋವಿಡ್-19ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿವೃತ್ತ ಹಿರಿಯ ಕಾರ್ಮಿಕರ ಮನೆ ಬಾಗಿಲಿಗೆ ಆರೋಗ್ಯ ವ್ಯವಸ್ಥೆ ಮತ್ತು ಉಚಿತಚಿಕಿತ್ಸೆ ನೀಡಬೇಕು. ಮಾತ್ರೆಗಳನ್ನು ಮನೆಗೆ ತಲುಪಿಸಬೇಕು.ಸಮಾಜದ ಆಧಾರ ಸ್ತಂಭಗಳಾಗಿರುವಂತಹ ನಿವೃತ್ತ ಹಿರಿಯ ಶ್ರಮ ಜೀವಿಗಳಿಗೆ ಮಧ್ಯಾಹ್ನದ ಬಿಸಿಯೂಟಕೊಡಲು ಕ್ರಮ ಕೈಗೊಳ್ಳಬೇಕು.ಪ್ರತಿ ತಿಂಗಳು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಪಿಂಚಣಿ ಅದಾಲತ್ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಕಾರ್ಯದರ್ಶಿ ಜಬೀನಾಖಾನಂ, ಜಿಲ್ಲಾ ಅಧ್ಯಕ್ಷ ಬಾಬು ಸಾಬ್, ಉಪಾಧ್ಯಕ್ಷ ಖಮರುನ್ನೀಸಾ, ಕಾರ್ಯಕರ್ತ ಕರಿಬಸಪ್ಪ ಎಂ., ಕಾರ್ಯಕರ್ತ ಅನ್ವರ್‍ಖಾನ್, ಸಿಐಟಿಯು ಮುಖಂಡರಾದ ಶ್ರೀನಿವಾಸ್, ಅಬ್ದುಲ್ ಘನಿ ತಾಹೀರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.