ADVERTISEMENT

ಸರ್ಕಾರಿ ಮಹಿಳಾ ಕಾಲೇಜು: ವಿಶೇಷ ಬಿಕಾಂ (ಬಿಎಫ್‌ಎಸ್‌ಐ) ಕೋರ್ಸ್‌ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:11 IST
Last Updated 4 ಜೂನ್ 2025, 15:11 IST

ದಾವಣಗೆರೆ: ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಪದವಿಯ ವಿವಿಧ ಕೋರ್ಸ್‌ಗಳ ಜತೆಗೆ ಕಳೆದ ಸಾಲಿನಿಂದ ಬಿಕಾಂ–ಬಿಎಫ್‌ಎಸ್‌ಐ–ಬ್ಯಾಂಕಿಂಗ್‌ ಫೈನಾನ್ಷಿಯಲ್‌ ಸರ್ವೀಸಸ್‌ ಅಂಡ್‌ ಇನ್‌ಶೂರೆನ್ಸ್‌ (ಬಿಎಫ್‌ಎಸ್‌ಐ) ಕೋರ್ಸ್‌ ಆರಂಭವಾಗಿದೆ.

ಇದು ಮೂರು ವರ್ಷದ ಕೋರ್ಸ್‌ ಆಗಿದ್ದು, ಮೂರನೇ ವರ್ಷದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ನೇರವಾಗಿ ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿವೆ. ಈ ವೇಳೆ ಒಪ್ಪಂದದ ಅನುಸಾರವಾಗಿ ₹ 10,000ವರೆಗೂ ಭತ್ಯೆ ನೀಡಲಿವೆ. 2024–25ನೇ ಸಾಲಿನಲ್ಲಿ 35 ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಿಕೊಂಡಿದ್ದು, ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾರೆ. 2025–26ನೇ ಸಾಲಿಗೆ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೋರ್ಸ್‌ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಇನ್ನೂ ಅವಕಾಶವಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಂ.ಮಂಜಣ್ಣ ತಿಳಿಸಿದ್ದಾರೆ.

ಅಪ್ರೆಂಟಿಸ್‌ ಎಂಬಡೆಡ್‌ ಡಿಗ್ರಿ ಪ್ರೊಗ್ರಾಮ್‌ ಅಡಿ ಈ ಕೋರ್ಸ್‌ ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಕೌಶಲ ಶಿಕ್ಷಣ ಸಿಗಲಿದೆ. ವಿದ್ಯಾರ್ಥಿಗಳ ಕೋರ್ಸ್‌ ಅನ್ನು ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಬಿಎ ಪದವಿಯಲ್ಲಿ ಎಚ್‌ಇಎಸ್‌, ಎಚ್‌ಕೆಎಸ್‌, ಎಚ್‌ಇಪಿ, ಪಿಎಸ್‌ಇ, ಎಚ್‌ಇಇ, ಎಚ್‌ಪಿಪಿ, ಇಕೆಜೆ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಬಿಎಸ್‌ಸಿ ಪದವಿಯಲ್ಲಿ ಪಿಸಿಎಂ, ಪಿಎಂಸಿಎಸ್‌ ಮತ್ತು ಸಿಬಿಝಡ್‌ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9980992091/9880912850/9844444459/9740111646 ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.