ಭದ್ರಾವತಿ: ಹಳೇ ನಗರದ ನಿರ್ಮಲ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯರ ದಿನ ಆಚರಿಸಲಾಯಿತು. ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಸ್ಪತ್ರೆಯ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ ಮಾತನಾಡಿ, ‘ವೈದ್ಯರು ತಮ್ಮ ಕುಟುಂಬ, ವೈಯಕ್ತಿಕ ಜೀವನಕ್ಕಿಂತ ರೋಗಿಗಳ ಹಿತ ಕಾಪಾಡುವಲ್ಲಿ ಮುಂದಿರುತ್ತಾರೆ. ವೈದ್ಯರ ಕೆಲಸ ವೃತ್ತಿಯಲ್ಲ, ಅದೊಂದು ಸೇವೆಯಾಗಿದೆ. ಹುಟ್ಟಿನಿಂದ ಸಾಯುವವರೆಗೂ ಜನರ ಜೊತೆ ಇರುವವರು ವೈದ್ಯರು’ ಎಂದರು.
ಡಾ. ಬೆಂಗಳೂರಿ ಮಾತನಾಡಿ, ‘ಅತ್ಯುತ್ತಮ ವೈದ್ಯನಾಗಲು ಪ್ರಾಮಾಣಿಕತೆ, ಸ್ನೇಹಪರ ಗುಣ ಹೊಂದಿರಬೇಕು. ವೈದ್ಯರು ತುರ್ತು ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸಮಯವನ್ನು ತ್ಯಾಗ ಮಾಡಲು ಸಿದ್ಧವಿರಬೇಕು’ ಎಂದರು.
ಡಾ.ರಿಜೀನಾ, ಡಾ.ಗ್ಲಾಡಿಸ್ ಪಿಂಟೋ, ಡಾ.ಅಂಜಲಿನ್ ಸಿಂತಿಯಾ ವಾಸ್, ಡಾ.ಸುನೀತಾ ಎಸ್., ಡಾ.ಎಸ್.ಮಲ್ಲಿಕಾರ್ಜುನ್, ಡಾ.ಸೈಯದ್ ಶಾಬುದ್ದೀನ್, ಡಾ.ಅನುಪಮಾ, ಡಾ.ನಿತಿನ್ ಕೆ.ಜಿ., ಡಾ.ಎಚ್.ಡಿ. ಅಶ್ವಥ್, ಡಾ.ರಕ್ಷಿತ್ ಎಂ.ಆರ್., ಡಾ.ರಾಮಕೃಷ್ಣ ಎಚ್.ಕೆ., ಡಾ.ಸ್ವರ್ಣಲತಾ ಎಂ.ಸಿ., ಡಾ.ಪ್ರೀತಿ ಜೆ.ಎಂ., ಡಾ.ಪುರುಷೋತ್ತಮ್ ಎಚ್., ಡಾ.ಶೋಭಾ ಎಚ್.ಡಿ. ಉಪಸ್ಥಿತರಿದ್ದರು.
ನಿರ್ಮಲ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಹಿಲರಿ, ನರ್ಸಿಂಗ್ ಸೂಪರಿಡೆಂಟ್ ಸಿಸ್ಟರ್ ವಿನ್ಸಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.