ADVERTISEMENT

ಗೋಶಾಲೆಗೆ ಮೇವು ದಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:47 IST
Last Updated 19 ಸೆಪ್ಟೆಂಬರ್ 2021, 4:47 IST
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 54ನೇ ಜನ್ಮದಿನದ ಅಂಗವಾಗಿ ಎಸ್ಸೆಸ್ಸೆಂ ಅಭಿಮಾನಿ ಬಳಗದಿಂದ ಶನಿವಾರ ದಾವಣಗೆರೆ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದ ಆಶ್ರಿತರಿಗೆ ಶಾಲು- ಹಣ್ಣು ವಿತರಣೆ ಮಾಡಲಾಯಿತು
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 54ನೇ ಜನ್ಮದಿನದ ಅಂಗವಾಗಿ ಎಸ್ಸೆಸ್ಸೆಂ ಅಭಿಮಾನಿ ಬಳಗದಿಂದ ಶನಿವಾರ ದಾವಣಗೆರೆ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದ ಆಶ್ರಿತರಿಗೆ ಶಾಲು- ಹಣ್ಣು ವಿತರಣೆ ಮಾಡಲಾಯಿತು   

ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 54ನೇ ಜನ್ಮದಿನದ ಅಂಗವಾಗಿ ಎಸ್ಸೆಸ್ಸೆಂ ಅಭಿಮಾನಿ ಬಳಗದಿಂದ ಶನಿವಾರ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದ ಆಶ್ರಿತರಿಗೆ ಶಾಲು- ಹಣ್ಣು ವಿತರಣೆ ಹಾಗೂ ಆವರಗೆರೆ ಗೋಶಾಲೆಗೆ ಮೇವು ವಿತರಣೆ ಹಮ್ಮಿಕೊಳ್ಳಲಾಯಿತು.

ಹಿರಿಯ ವನಿತೆಯರ ಆನಂದಧಾಮದ ಅಧ್ಯಕ್ಷೆ ಸುನೀತಾ ವೀರನಾರಾಯಣ, ಕಾರ್ಯದರ್ಶಿ ಶೈಲಜಾ, ಖಜಾಂಚಿ ಸುಷ್ಮಾ ವೇಣುಗೋಪಾಲ್, ವಾರ್ಡನ್ ಲತಾ ಮಾತನಾಡಿ ಶಾಮನೂರು ಶಿವಶಂಕರಪ್ಪನವರು, ಎಸ್.ಎಸ್.ಮಲ್ಲಿಕಾರ್ಜುನ್ ಅವರ ದಾನಧರ್ಮವನ್ನು ಶ್ಲಾಘಿಸಿ ಅವರ ಸೇವೆ ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿದರು.

ನಂತರ ಆವರಗೆರೆಯ ಗೋಶಾಲೆಗೆ ತೆರಳಿ ಮೇವು ನೀಡಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಎಸ್ಸೆಸ್ಸೆಂ ಅಭಿಮಾನಿ ಬಳಗದ ಅಯೂಬ್ ಪೈಲ್ವಾನ್, ವಿಜಯಕುಮಾರ್ ಜೈನ್, ಸತೀಶ್, ಜಮ್ಮನಳ್ಳಿ ನಾಗರಾಜ್, ಸಾಗರ್, ಸುಬಾನ್ ಸಾಬ್, ಅಬ್ದುಲ್ ಜಬ್ಬಾರ್, ಹರೀಶ್ ಕೆ.ಎಲ್. ಬಸಾಪುರ, ಬಾತಿ ಶಿವಕುಮಾರ್, ರಾಘವೇಂದ್ರ ಗೌಡ, ಮಂಜುನಾಥ್ ಕತ್ತಲಗೆರೆ, ಯುವರಾಜ್, ಮೇಘರಾಜ್, ವಿನಯ್ ಜೆ.ಎಚ್., ಹರೀಶ್ ಎಚ್., ಸೈಯದ್ ಜಿಕ್ರಿಯಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.