ADVERTISEMENT

ದಾವಣಗೆರೆ: ಔಷಧ ಮಾರಾಟ ಅಂಗಡಿಗಳ ಬಂದ್

ಗುಳಿಗೆಗಳಿಗಾಗಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 12:09 IST
Last Updated 28 ಸೆಪ್ಟೆಂಬರ್ 2018, 12:09 IST
ಚನ್ನಗಿರಿ ಪಟ್ಟಣದಲ್ಲಿ ಔಷಧಿ ಅಂಗಡಿಯನ್ನು ಶುಕ್ರವಾರ ಬಂದ್ ಮಾಡಿರುವುದು
ಚನ್ನಗಿರಿ ಪಟ್ಟಣದಲ್ಲಿ ಔಷಧಿ ಅಂಗಡಿಯನ್ನು ಶುಕ್ರವಾರ ಬಂದ್ ಮಾಡಿರುವುದು   

ಚನ್ನಗಿರಿ: ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯ ಔಷಧ ವ್ಯಾಪಾರಗಳ ಸಂಘ ಕರೆ ನೀಡಿದ್ದ ಬಂದ್‌ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಲ್ಲಿನ ಔಷಧ ಮಾರಾಟ ಅಂಗಡಿಗಳು ಶುಕ್ರವಾರ ಬಂದ್ ಆಗಿದ್ದವು. ಔಷಧ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ನೂರಾರು ರೋಗಿಗಳು ಪರದಾಡುವಂತಾಯಿತು. ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಬಂದ್ ಅರಿವು ಇರಲಿಲ್ಲ. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧ ಮಾರಾಟ ಮಳಿಗೆಗಳಲ್ಲಿ ಜನ ದಟ್ಟಣೆ ಇತ್ತು. ಜನರು ಸರತಿ ಸಾಲಿನಲ್ಲಿ ಔಷಧಗಳನ್ನು ಖರೀದಿಸಿದರು.

ತಾಲ್ಲೂಕಿನ ಸಂತೇಬೆನ್ನೂರು, ಬಸವಾಪಟ್ಟಣ, ತ್ಯಾವಣಿಗೆ, ಕೆರೆಬಿಳಚಿ, ನಲ್ಲೂರು, ತಾವರೆಕೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ನುಗ್ಗಿಹಳ್ಳಿ, ಚಿಕ್ಕಗಂಗೂರು, ಹೊದಿಗೆರೆ, ಹೆಬ್ಬಳಗೆರೆ, ದೇವರಹಳ್ಳಿ, ಕೊಂಡದಹಳ್ಳಿ, ಮಾವಿನಕಟ್ಟೆ ಮುಂತಾದ ಗ್ರಾಮಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಔಷಧಿ ಅಂಗಡಿಗಳನ್ನು ಮುಚ್ಚಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.