ADVERTISEMENT

ದೇವರು, ಧರ್ಮ ಹೆಸರಲ್ಲಿ ಶೋಷಣೆ: ಬಸವಪ್ರಭುಶ್ರೀ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 15:50 IST
Last Updated 4 ಜನವರಿ 2020, 15:50 IST
ಜಯದೇವಶ್ರೀಗಳ 63ನೇ ಸ್ಮರಣೋತ್ಸವ ಪ್ರಯುಕ್ತ ದಾವಣಗೆರೆ ದೊಡ್ಡಪೇಟೆ ವಿರಕ್ತಮಠದಲ್ಲಿ ಜನಜಾಗೃತಿ ಪಾದಯಾತ್ರೆಗೆ ಬಸವಪ್ರಭು ಸ್ವಾಮೀಜಿ ಶನಿವಾರ ಚಾಲನೆ ನೀಡಿದರು
ಜಯದೇವಶ್ರೀಗಳ 63ನೇ ಸ್ಮರಣೋತ್ಸವ ಪ್ರಯುಕ್ತ ದಾವಣಗೆರೆ ದೊಡ್ಡಪೇಟೆ ವಿರಕ್ತಮಠದಲ್ಲಿ ಜನಜಾಗೃತಿ ಪಾದಯಾತ್ರೆಗೆ ಬಸವಪ್ರಭು ಸ್ವಾಮೀಜಿ ಶನಿವಾರ ಚಾಲನೆ ನೀಡಿದರು   

ದಾವಣಗೆರೆ: ದೇವರು, ಧರ್ಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಟಿ.ವಿ.ಗಳಲ್ಲಿ ಬೆಳಿಗ್ಗೆ ಬರುವ ಗುರೂಜಿಗಳಿಂದಾಗಿ ಬದುಕಿನ ನೆಮ್ಮದಿಯೇ ಹಾಳಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಜಯದೇವಶ್ರೀಗಳ 63ನೇ ಸ್ಮರಣೋತ್ಸವ ಪ್ರಯುಕ್ತ ದೊಡ್ಡಪೇಟೆ ವಿರಕ್ತಮಠದಲ್ಲಿ ಜನಜಾಗೃತಿ ಪಾದಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಸೂರ್ಯಗ್ರಹಣ ಹಿಡಿದ ಸಮಯದಲ್ಲಿ ಮೌಢ್ಯದಿಂದಾಗಿ ದೇಶವೇ ಬಂದ್ ಆಗಿತ್ತು. ಮೂಢನಂಬಿಕೆಗೆ ಬಲಿಯಾಗಬಾರದು. ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಅಜ್ಞಾನವನ್ನು ಕಿತ್ತು ಹಾಕಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಕಂದಾಚಾರ, ಜಾತೀಯತೆ, ಬಡತನ, ಅನಕ್ಷರತೆ ಹೋಗಲಾಡಿಸಲು ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ವಿರಕ್ತಮಠದಿಂದ ಮದಕರಿನಾಯಕ ವೃತ್ತ, ಸ್ವಾಗೇರಪೇಟೆ, ಕಾಯಿಪೇಟೆ, ವಿಜಯಲಕ್ಷ್ಮಿ ರಸ್ತೆಯ ಮೂಲಕ ಜನಜಾಗೃತಿ ಪಾದಯಾತ್ರೆ ಸಾಗಿತು.

ಶಿರಗುಪ್ಪ ಬಸವಭೂಷಣ ಸ್ವಾಮೀಜಿ, ಎಚ್.ಕೆ. ರಾಮಚಂದ್ರಪ್ಪ, ಕಣಕುಪ್ಪಿ ಮುರುಗೇಶಪ್ಪ, ಸಂಗಪ್ಪ, ಅಕ್ಕಿ ಚನ್ನಪ್ಪ, ಮೈಸೂರುಮಠದ ಮುಪ್ಪಯ್ಯ, ಮಹದೇವಮ್ಮ, ಇಶಾನಾಯ್ಕ, ಶರಣ ಬಸವ, ಕೀರ್ತಿಕುಮಾರ, ಕುಮಾರಸ್ವಾಮಿ, ಎಂ.ಸಿ.ರೇಖಾ ಇದ್ದರು. ಬಸವಕಲಾ ಲೋಕದ ಕಲಾವಿದರು ಜನಜಾಗೃತಿ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.