ADVERTISEMENT

ಜನವರಿ15ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಮತದಾರರ ಪಟ್ಟಿ ಪರಿಶೀಲಿಸಿದ ವಿಶೇಷ ವೀಕ್ಷಕ ಮುನೀಶ್‌ ಮೌದ್ಗೀಲ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:04 IST
Last Updated 23 ಡಿಸೆಂಬರ್ 2018, 17:04 IST
ದಾವಣಗೆರೆಯಲ್ಲಿ ಭಾನುವಾರ ನಡೆದ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಸಭೆಯಲ್ಲಿ ವಿಶೇಷ ವೀಕ್ಷಕ ಮುನೀಶ್‌ ಮೌದ್ಗಿಲ್‌ ಮಾತನಾಡಿದರು
ದಾವಣಗೆರೆಯಲ್ಲಿ ಭಾನುವಾರ ನಡೆದ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಸಭೆಯಲ್ಲಿ ವಿಶೇಷ ವೀಕ್ಷಕ ಮುನೀಶ್‌ ಮೌದ್ಗಿಲ್‌ ಮಾತನಾಡಿದರು   

ದಾವಣಗೆರೆ: ಭಾವಚಿತ್ರವಿರುವ ವಿಶೇಷ ಮತದಾರರ ಪರಿಷ್ಕರಣಾ ಅಂತಿಮ ಪಟ್ಟಿಯನ್ನು ಜನವರಿ 15ಕ್ಕೆ ಪ್ರಕಟಿಸಲಾಗುವುದು ಎಂದು ವಿಶೇಷ ವೀಕ್ಷಕ ಮುನೀಶ್ ಮೌದ್ಗಿಲ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಭಾನುವಾರ ನಡೆದ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಸಭೆಯಲ್ಲಿ ಅವರು ಮಾತನಾಡಿದರು.

ಅರ್ಹತಾ ದಿನಾಂಕ 2019ರ ಜನವರಿ 1ಕ್ಕೆ ಸಂಬಂಧಿಸಿದಂತೆ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇತ್ಯರ್ಥಗೊಳಿಸಬೇಕು. ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಸಹಾಯಕ ನೋಂದಣಾಧಿಕಾರಿಗಳಿಗೆ ಅವರು ಸೂಚಿಸಿದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ, ‘ನಗರದ 21ನೇ ವಾರ್ಡ್‌ನಲ್ಲಿ ಬಹುತೇಕ ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು. ಮತಗಟ್ಟೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುನೀಶ್ ಮೌದ್ಗಿಲ್, ‘ಈ ಕುರಿತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗುವುದು. ಪರಿಶೀಲಿಸಿ ಸಮಸ್ಯೆ ಬಗೆ ಹರಿಸಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್‌ ಸಂತೋಷ್‌ಕುಮಾರ್‌, ನಾಗರಾಜು, ಎಸ್. ರವಿ, ತುಷಾರ್, ರೆಹಾನ್‌ ಪಾಷಾ, ಚುನಾವಣಾ ತಹಶೀಲ್ದಾರ್‌ ಪ್ರಸಾದ್, ಪಾಲಿಕೆಯ ಅಧಿಕಾರಿ ಗದಿಗೇಶ್ ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿ ಹಾಜರಿದ್ದರು.

ಅಂಕಿ– ಅಂಶಗಳು

20,124 ಹೆಸರು ಕೈಬಿಡಲು ಬಂದ ಅರ್ಜಿಗಳು

8,110 ತಿದ್ದುಪಡಿಗೆ ಬಂದ ಅರ್ಜಿಗಳು

2,508 ಹೆಸರು ವರ್ಗಾವಣೆಗೆ ಬಂದ ಅರ್ಜಿಗಳು

**

ಸೇರ್ಪಡೆಗೆ ಬಂದ ಅರ್ಜಿಗಳ ವಿವರ

ವಿಧಾನಸಭಾ ಕ್ಷೇತ್ರ ಅರ್ಜಿಗಳು

ಜಗಳೂರು 776

ಹರಪನಹಳ್ಳಿ 2,434

ಹರಿಹರ 2,769

ದಾವಣಗೆರೆ ಉತ್ತರ 5,691

ದಾವಣಗೆರೆ ದಕ್ಷಿಣ 3,524

ಮಾಯಕೊಂಡ 2,471

ಚನ್ನಗಿರಿ 1,788

ಹೊನ್ನಾಳಿ 1,834

ಒಟ್ಟು 21,287

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.