ADVERTISEMENT

ಹರಿಹರದಲ್ಲಿ ಫರ್ನೀಚರ್‌ ಮಳಿಗೆಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 19:40 IST
Last Updated 26 ನವೆಂಬರ್ 2021, 19:40 IST
ಹರಿಹರದಲ್ಲಿ ಫರ್ನೀಚರ್‌ ಮಳಿಗೆಗೆ ಬೆಂಕಿ
ಹರಿಹರದಲ್ಲಿ ಫರ್ನೀಚರ್‌ ಮಳಿಗೆಗೆ ಬೆಂಕಿ   

ಹರಿಹರ: ನಗರದ ಶಿವಮೊಗ್ಗ ರಸ್ತೆಯಲ್ಲಿನ ಪ್ರಭಾಕರ್‌ ಫರ್ನೀಚರ್‌ ಮಳಿಗೆ ಹಾಗೂ ಮಮತಾ ವಾಚ್‌ ಸೆಂಟರ್‌ ಅಂಗಡಿಗೆ ಶುಕ್ರವಾರ ತಡರಾತ್ರಿ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಯಾವುದೇ ಜೀವಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಶುಕ್ರವಾರ ಮಧ್ಯರಾತ್ರಿ ಮೊದಲನೇ ಮಹಡಿಯಲ್ಲಿರುವ ಪ್ರಭಾಕರ್‌ ಫರ್ನೀಚರ್‌ ಮಳಿಗೆ ಹಾಗೂ ನೆಲ ಮಹಡಿಯಲ್ಲಿರುವ ಮಮತಾ ವಾಚ್‌ ಸೆಂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಕೆಲ ಹೊತ್ತಿನಲ್ಲೇ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಬೆಂಕಿಯ ತೀವ್ರತೆ ಹೆಚ್ಚಾಗಿ ಲಕ್ಷಾಂತರ ಮೌಲ್ಯದ ಪೀಠೋಪರಣ ಹಾಗೂ ಅಪಾರ ಮೌಲ್ಯದ ವಾಚ್‌ಗಳು ಬೆಂಕಿಗೆ ಆಹುತಿಯಾಯಿತು.

ಹರಿಹರದ ಜೊತೆಗೆ ದಾವಣಗೆರೆ, ಕುಮಾರಪಟ್ಟಣದಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳಗಿನಜಾವದವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.