ನ್ಯಾಮತಿ: ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು, ಮದುವೆಗೆ ದಿನ ನಿಗದಿಯಾಗ ಬಳಿಕ ಯುವಕ ನಾಪತ್ತೆಯಾಗಿದ್ದಾನೆ ಎಂದು ನೊಂದ ಮಹಿಳೆ ದೂರು ನೀಡಿದ್ದಾರೆ.
ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ವಿಚ್ಛೇದಿತ ಮಹಿಳೆ ದೂರು ನೀಡಿದವರು.
‘ನ್ಯಾಮತಿಯ ಪ್ರಶಾಂತರೆಡ್ಡಿ ಎಂಬಾತ ಪರಿಚಯ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ತಿಳಿಸಿ ಮನೆಗೆ ಕರೆಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದಾನೆ. ಒಪ್ಪದಿದ್ದಾಗ ಪ್ರಾಣ ಬೆದರಿಕೆ ಹಾಕಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ನಿಮ್ಮ ತಾಯಿಯ ಒಪ್ಪಿಗೆ ಪಡೆದು ಮದುವೆಯಾಗೋಣ ಎಂದು ತಿಳಿಸಿದ್ದ. ಜೂನ್ 29ರಂದು ಮದುವೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ಜೂನ್ 28ರಂದು ಪ್ರಶಾಂತ್ ರೆಡ್ಡಿ ನಾಪತ್ತೆಯಾಗಿ ಮೋಸ ಮಾಡಿದ್ದಾನೆ’ ನ್ಯಾಮತಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.