ADVERTISEMENT

ಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಗೋಡ್ಸೆ ಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 4:22 IST
Last Updated 25 ಸೆಪ್ಟೆಂಬರ್ 2022, 4:22 IST
ದಾವಣಗೆರೆಯಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ನಾಥೂರಾಂ ಗೋಡ್ಸೆಯ ಭಾವಚಿತ್ರ ಪ್ರದರ್ಶಿಸಲಾಯಿತು.
ದಾವಣಗೆರೆಯಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ನಾಥೂರಾಂ ಗೋಡ್ಸೆಯ ಭಾವಚಿತ್ರ ಪ್ರದರ್ಶಿಸಲಾಯಿತು.   

ದಾವಣಗೆರೆ: ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದ ನಾಥೂರಾಂ ಗೋಡ್ಸೆಯ ಭಾವಚಿತ್ರಗಳನ್ನು ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಶನಿವಾರ ನಗರದಲ್ಲಿ ನಡೆದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಪ್ರದರ್ಶಿಸಲಾಯಿತು.

ಸಿದ್ಧಗಂಗಾಶ್ರೀ, ಶಿವಾಜಿ, ವಿ.ಡಿ. ಸಾವರ್ಕರ್‌, ಪುನೀತ್‌ ರಾಜ್‌ಕುಮಾರ್‌, ದರ್ಶನ್‌ ಚಿತ್ರಗಳಿರುವ ಬೃಹತ್‌ ಬಾವುಟಗಳು, ‘ಕಿಚ್ಚ ಸಾಮ್ಯಾಜ್ಯ’ ಎಂದು ಬರೆದ ಬಾವುಟಗಳು, ಕನ್ನಡ ಧ್ವಜ, ಭಗವಧ್ವಜ, ಅರ್ಧ ಹನುಮನ ಚಿತ್ರ ಇರುವ ಧ್ವಜಗಳು ಎಲ್ಲೆಡೆ ಹಾರಾಡುತ್ತಿದ್ದವು. ಇದರ ನಡುವೆಯೇ ಕೆಲವರು ನಾಥೂರಾಂ ಗೋಡ್ಸೆಯ ಫೋಟೊಗಳನ್ನು ಹಿಡಿದು ಸಂಭ್ರಮಿಸಿರುವುದು ಕಂಡುಬಂತು. ಫೋಟೊದ ಕೆಳಭಾಗದಲ್ಲಿ ‘ಅಖಂಡ ಭಾರತದ ಶಿಲ್ಪಿ ನಾಥೂರಾಂ ಗೋಡ್ಸೆ’ ಎಂಬ ಅಡಿಬರಹ ಇರುವುದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT