ADVERTISEMENT

ದಾವಣಗೆರೆ: ಅಂಗವಿಕಲನಿಗೆ ವಂಚನೆ

ಸ್ವಗ್ರಾಮಕ್ಕೆ ತೆರಳಲು ಗ್ರಾಮಸ್ಥರ ಸಹಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 11:52 IST
Last Updated 4 ಡಿಸೆಂಬರ್ 2019, 11:52 IST
ಎಚ್. ಬಸವರಾಜ್‌
ಎಚ್. ಬಸವರಾಜ್‌   

ಸಾಸ್ವೆಹಳ್ಳಿ (ದಾವಣಗೆರೆ): ವಿಶ್ವ ಅಂಗವಿಕಲ ದಿನಾಚರಣೆಯ ದಿವಸವೇ ಅಂಗವಿಕಲರೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರ್‌ಮಾನ್ವಿ ಗ್ರಾಮದ ಎಚ್. ಬಸವರಾಜ್‌ ವಂಚನೆಗೆ ಒಳಗಾದವರು.

ಕಾರ್ಯದ ನಿಮಿತ್ತ ದಾವಣಗೆರೆಗೆ ಬಂದಾಗ ದಾವಣಗೆರೆಯ ಹಳೆ ಬಸ್‌ ನಿಲ್ದಾಣದಲ್ಲಿ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ ನಾಗರಾಜ್ ಎಂದು ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದಾನೆ. ಆತ ಬಸವರಾಜ್ ಅವರ ಜೊತೆ ಸ್ನೇಹದಿಂದ ಮಾತನಾಡಿದ್ದಾರೆ. ಮೂತ್ರ ವಿಸರ್ಜನೆಗೆ ಹೋಗಿ ಬರುತ್ತೇನೆ ಎಂದು ₹ 1800, ₹ 2 ಸಾವಿರ ಮೌಲ್ಯದ ಮೊಬೈಲ್, ಒಂದು ಜೊತೆ ಬಟ್ಟೆ, ಪಿಯುಸಿ ಹಾಗೂ ಪದವಿ ಅಂಕಪಟ್ಟಿಗಳು ಇದ್ದ ಬ್ಯಾಗ್ ಅನ್ನು ನಾಗರಾಜ್‌ಗೆ ಕೊಟ್ಟಿದ್ದಾರೆ.

ADVERTISEMENT

ವಾಪಸ್‌ ಬಂದು ನೋಡಿದಾಗ ಆ ವ್ಯಕ್ತಿ ಇರಲಿಲ್ಲ. ಬಸವರಾಜ್ ಅವರು ಕ್ಯಾಸಿನಕೆರೆ ಗ್ರಾಮಕ್ಕೆ ಹೋಗಿ ವಿಚಾರಿಸಿದಾಗ ಆ ವ್ಯಕ್ತಿ ಗ್ರಾಮದಲ್ಲಿ ಇಲ್ಲ ಎಂಬುದು ಗೊತ್ತಾಗಿದೆ. ಗ್ರಾಮಸ್ಥರು ಸ್ವಗ್ರಾಮಕ್ಕೆ ತೆರಳಲು ಹಣದ ಸಹಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.