ADVERTISEMENT

ಸರ್ಕಾರಿ ನೌಕರರ ಸಂಘದ ಚುನಾವಣೆ; 19 ಸ್ಥಾನಗಳಿಗೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:58 IST
Last Updated 22 ಅಕ್ಟೋಬರ್ 2024, 15:58 IST

ಹಿರಿಯೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯೂರು ಶಾಖೆಯ 2024-29ರ ಅವಧಿಗೆ ಒಟ್ಟು 34 ನಿರ್ದೇಶಕರ ಸ್ಥಾನಗಳ ಪೈಕಿ 19 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಈ.ತಿಪ್ಪೇರುದ್ರಪ್ಪ ಹಾಗೂ ಸಹಾಯಕ ಚುನಾವಣಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್ ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು: 

ಕೆ.ಚಂದ್ರಶೇಖರ್ (ಕೃಷಿ ಇಲಾಖೆ), ಕೆ.ಬಿ.ತಿಪ್ಪೇಸ್ವಾಮಿ (ಕಂದಾಯ), ಎಸ್.ಅವಿನಾಶ್ (ಪಂಚಾಯತ್‌ರಾಜ್‌ ಎಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ), ಪಿ.ನಟರಾಜ್ (ಸಾರ್ವಜನಿಕ ಶಿಕ್ಷಣ), ಆರ್.ಅನಿಲ್ ಕುಮಾರ್ (ಸರ್ಕಾರಿ ಪದವಿಪೂರ್ವ ಕಾಲೇಜುಗಳು), ಪಿ.ಎನ್. ನರಸಿಂಹಮೂರ್ತಿ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳು- ಬೋಧಕೇತರು), ಕೆ. ಕಾಂತರಾಜು (ಅರಣ್ಯ ಇಲಾಖೆ), ಆರ್. ಲಕ್ಷ್ಮೀದೇವಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಎನ್. ಮಂಜುನಾಥಸ್ವಾಮಿ (ತೋಟಗಾರಿಕೆ), ಎಂ. ಪ್ರೇಮಲತಾ (ಖಜಾನೆ), ಕೆಂಪಣ್ಣ (ಭೂಮಾಪನ ಮತ್ತು ಭೂ ದಾಖಲೆ), ಸೈಯದ್ ಇಮ್ರಾನ್ ( ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಎಸ್. ಕುಮಾರಸ್ವಾಮಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಎಸ್. ಲಿಂಗರಾಜು (ಆಹಾರ ಮತ್ತು ನಾಗರಿಕ ಸರಬರಾಜು, ಮೀನುಗಾರಿಕೆ, ತೂಕ ಮತ್ತು ಅಳತೆ ಹಾಗೂ ಸಾರಿಗೆ), ಆರ್. ಮೇನಕಾ ಜ್ಯೋತಿ (ಕೃಷಿ ಉತ್ಪನ್ನ ಮಾರುಕಟ್ಟೆ), ಎಸ್. ಸತೀಶ್ (ಅಬಕಾರಿ ಮತ್ತು ವಾಣಿಜ್ಯ ತೆರಿಗೆ), ಕೆ.ರಾಜು (ನಗರಾಭಿವೃದ್ಧಿ ಮತ್ತು ಪೌರಾಡಳಿತ), ಎನ್. ಶಿವರಾಜ್ (ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ), ಟಿ. ತಿಪ್ಪೇಸ್ವಾಮಿ (ಸಮಾಜ ಕಲ್ಯಾಣ ಇಲಾಖೆ). 

ADVERTISEMENT

ಇನ್ನುಳಿದ 9 ಮತಕ್ಷೇತ್ರಗಳಿಂದ 15 ಸ್ಥಾನಗಳಿಗಾಗಿ ಅ.28 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಾಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.