ADVERTISEMENT

ಹರಪನಹಳ್ಳಿ: ರಸಗೊಬ್ಬರಕ್ಕಾಗಿ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 2:45 IST
Last Updated 23 ಜುಲೈ 2021, 2:45 IST
ಹರಪನಹಳ್ಳಿ ಸಹಕಾರ ಸಂಘದ ಮಳಿಗೆಯ ಮುಂದೆ ರೈತರು ಮತ್ತು ರೈತ ಮಹಿಳೆಯರು ಗೊಬ್ಬರಕ್ಕಾಗಿ ಮುಗಿಬಿದ್ದಿರುವುದು.
ಹರಪನಹಳ್ಳಿ ಸಹಕಾರ ಸಂಘದ ಮಳಿಗೆಯ ಮುಂದೆ ರೈತರು ಮತ್ತು ರೈತ ಮಹಿಳೆಯರು ಗೊಬ್ಬರಕ್ಕಾಗಿ ಮುಗಿಬಿದ್ದಿರುವುದು.   

ಹರಪನಹಳ್ಳಿ: ತಾಲ್ಲೂಕಿಗೆ ಬೇಡಿಕೆಯನುಸಾರ ರಸಗೊಬ್ಬರ ಪೂರೈಕೆ ಆಗದ ಪರಿಣಾಮ ಅನ್ನದಾತರು ಪಟ್ಟಣದಲ್ಲಿ ಗೊಬ್ಬರಕ್ಕಾಗಿ ಅಲೆದಾಡುವಂತಾಗಿದೆ.

ಐದಾರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಸಂದರ್ಭದಲ್ಲಿ ಬೆಳೆಗಳಿಗೆ ಗೊಬ್ಬರ ಹಾಕುವ ಅಗತ್ಯವಿದೆ. ಆದರೆ, ರಸಗೊಬ್ಬರ ದೊರೆಯುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಪಟ್ಟಣದ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಮಳಿಗೆಯ ಮುಂದೆ ರೈತರು ಗೊಬ್ಬರ ಖರೀದಿಗಾಗಿ ಮುಗಿಬಿದ್ದಿದ್ದಾರೆ. 23 ಪ್ರಾಥಮಿಕ ಕೃಷಿಪತ್ತಿನ ಸಂಘಗಳಿಗೆ ರಸಗೊಬ್ಬರ ಮಾರಾಟಕ್ಕೆ ಅನುಮತಿಸಲಾಗಿದೆ. ಆದರೆ, ರೈತರ ಬೇಡಿಕೆಯನುಸಾರ ಗೊಬ್ಬರ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ಗೋಂದಿ ಮಂಜುನಾಥ ಮಾತನಾಡಿ, ‘ಸತತ ಮಳೆಯಾಗುತ್ತಿರುವುದರಿಂದ ರೈತರು ರಸಗೊಬ್ಬರವನ್ನು ಹೆಚ್ಚಾಗಿ ಬಳಸದೆ ನೈಂಟಿನಾಲ್, ನ್ಯಾನೊ ಯೂರಿಯಾ ದ್ರವರೂಪದ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಗೊಬ್ಬರದ ಬೇಡಿಕೆ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.