ADVERTISEMENT

ಮರ ಹತ್ತಿದ್ದ ಕುರಿಗಾಹಿ ವಿದ್ಯುತ್ ಸ್ಪರ್ಶಿಸಿ ಸಾವು

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:12 IST
Last Updated 30 ಮೇ 2024, 7:12 IST
ಕಡರನಾಯ್ಕನಹಳ್ಳಿ ಸಮೀಪದ ಹೊಸಪಾಳ್ಯ ಗ್ರಾಮದ ಮಳಲಹಳ್ಳಿ ರಸ್ತೆಯಲ್ಲಿ ಮರದ ಮೂಲಕ ಹಾದುಹೋಗಿದ್ದ ವಿದ್ಯುತ್ ತಂತು ತಗುಲಿ ಮರದಲ್ಲೇ ಮೃತಪಟ್ಟಿರುವ ಕುರಿಗಾಹಿ
ಕಡರನಾಯ್ಕನಹಳ್ಳಿ ಸಮೀಪದ ಹೊಸಪಾಳ್ಯ ಗ್ರಾಮದ ಮಳಲಹಳ್ಳಿ ರಸ್ತೆಯಲ್ಲಿ ಮರದ ಮೂಲಕ ಹಾದುಹೋಗಿದ್ದ ವಿದ್ಯುತ್ ತಂತು ತಗುಲಿ ಮರದಲ್ಲೇ ಮೃತಪಟ್ಟಿರುವ ಕುರಿಗಾಹಿ   

ಕಡರನಾಯ್ಕನಹಳ್ಳಿ: ಮರವನ್ನೇರಿ ಕುರಿಗಳಿಗೆ ಸೊಪ್ಪು ಕಡಿದುಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕುರಿಗಾಹಿ ಮೃತಪಟ್ಟ ಘಟನೆ ಸಮೀಪದ ಹೊಸಪಾಳ್ಯ ಗ್ರಾಮದ ಮಳಲಹಳ್ಳಿ ರಸ್ತೆಯಲ್ಲಿ ನಡೆದಿದೆ. 

ಕೊಟ್ರೇಶ್ (21) ಮೃತ ವ್ಯಕ್ತಿ.

ವಿದ್ಯುತ್ ತಂತಿಗಳು ಹಾದುಹೋಗಿದ್ದ ಮರವನ್ನು ಬುಧವಾರ ಬೆಳಿಗ್ಗೆ ಹತ್ತಿದ್ದ ಕೊಟ್ರೇಶ್, ಕುರಿಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ಅವಘಡ ಸಂಭವಿಸಿದೆ.

ADVERTISEMENT

ಮೃತ ವ್ಯಕ್ತಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರಿದ್ದಾರೆ. ಇವರು ಮೂಲತಃ ಹಾನಗಲ್ ತಾಲ್ಲೂಕು ಮಾಸ್ತಿಕಟ್ಟೆ ಗ್ರಾಮದವರು. 

ಎಷ್ಟು ಹೊತ್ತಾದರೂ ಕೊಟ್ರೇಶ್ ಬಾರದೆ ಇದ್ದಾಗ ಅವರ ತಂದೆ ಹುಟುಕಾಟ ನಡೆಸಿದರು. ಮಗ ಮರದ ಮೇಲೆಯೇ ಒರಗಿಕೊಂಡು ಮೃತಪಟ್ಟಿರುವುದು ಕಂಡುಬಂತು ಎಂದು ತಂದೆ ಲಕ್ಷಣ ಹೇಳಿಕೆ ನೀಡಿದ್ದಾರೆ.

ಮಲೆಬೆನ್ನೂರು ಪಿಎಸ್‌ಐ ಪ್ರಭು ಡಿ. ಮತ್ತು ಪೋಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮಲೆಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.