ಹರಿಹರ: ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿತು.
ಮೇ 2ರಂದು ನಗರದಲ್ಲಿ 8.8 ಮಿ.ಮೀ., ಕೊಂಡಜ್ಜಿಯಲ್ಲಿ 22.4, ಮಲೇಬೆನ್ನೂರಿನಲ್ಲಿ 36.4, ಹೊಳೆಸಿರಿಗೆರೆಯಲ್ಲಿ 7.6 ಮಿ.ಮೀ. ಮಳೆಯಾಗಿತ್ತು. ಐದು ದಿನಗಳ ನಂತರ ಗುರುವಾರ ಸಾಧಾರಣ ಮಳೆ ಸುರಿಯಿತು.
ತಂಪಾದ ಇಳೆ: ತಾಲ್ಲೂಕಿನಾದ್ಯಂತ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಬಿಸಿಲ ಧಗೆ ತಾಳಲಾರದೇ ಜನರು ತಂಪು ಪಾನೀಯ, ಮಜ್ಜಿಗೆ, ಎಳನೀರಿಗೆ ಮೊರೆ ಹೋಗಿದ್ದರು. ಬಿಸಿಲಿಗೆ ಕಾದಿರುತ್ತಿದ್ದ ನಗರದ ಸಿಮೆಂಟ್ ರಸ್ತೆಗಳು ಮತ್ತಷ್ಟು ಧಗೆ ಹೆಚ್ಚಿಸಿದ್ದವು. ಈ ರಸ್ತೆಗಳಲ್ಲಿ ಸಂಚರಿಸುವುದು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರ ಸವಾಲಾಗಿತ್ತು. ಸಂಜೆ ಸುರಿದ ಮಳೆಯು ಬಿಸಿಲಿನ ಧಗೆಯಿಂದ ಜನರಿಗೆ ವಿರಾಮ ದೊರಕಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.