
ಹರಿಹರ: ಇಲ್ಲಿನ ಇತಿಹಾಸ ಪ್ರಸಿದ್ದ ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಫೆ.1ರಂದು ಬೆಳಿಗ್ಗೆ 10.55ರ ಮೇಷ ಲಗ್ನದ ಶುಭ ಗಳಿಗೆಯಲ್ಲಿ ಜರುಗಲಿದೆ.
ಬೆಳಿಗ್ಗೆ ಮಾಘ ಶುಕ್ಲ ಪೌರ್ಣಿಮದಲ್ಲಿ ಹರಿಹರೇಶ್ವರ ಸ್ವಾಮಿಗೆ ಗಣಪತಿ ಪೂಜೆ, ರುದ್ರಾಭಿಷೇಕ, ಆವಾಹಿತ ದೇವತಾ ಪೂಜಾ, ಜಪ, ಪ್ರಧಾನ ದೇವತಾ ಹಾಗೂ ರತಾಂಗ ಹೋಮ ಹವನಾದಿಗಳು, ಬಲಿದಾನ, ಮಹಾಪೂರ್ಣಾಹುತಿ, ಮಹಾಪೂಜೆ, ಮಂತ್ರಪುಷ್ಪ, ಅಷ್ಠಾವಧಾನ, ಶೇಯಃ ಪ್ರಾರ್ಥನೆ ನೆರೆವೇರುವುದು.
ರಥೋತ್ಸವ ನಿಮಿತ್ತ ಜ. 28 ರಿಂದ ವಿವಿಧ ಧಾರ್ಮಿಕ ವಿಧಿ, ವಿಧಾನಗಳು ಆರಂಭವಾಗಲಿದ್ದು, ಪ್ರತಿದಿನ ಬೆಳಿಗ್ಗೆ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ–ಹೋಮ ಮತ್ತು ಬಲಿದಾನ ಹಾಗೂ ಸಂಜೆ ಪಂಚೋಪಚಾರ ಪೂಜಾ ಬಲಿದಾನ ನಡೆಯಲಿವೆ.
ಫೆ.2 ರಂದು ಬೆಳಿಗ್ಗೆ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ಸ್ಥಾಪಿತ ದೇವತಾ ಪೂಜೆ, ನಾಂದಿ ಕಂಕಣ ವಿಸರ್ಜನೆ ಪೂಜೆ, ಧ್ವಜ ವಿಸರ್ಜನೆಯೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳುವವು.
ದೇವಸ್ಥಾನ ಹಿಂಭಾಗದ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಜಗದೀಶ್ ಎಂ.ಜಿ. ಹಾಗೂ ಸಮರ್ಥ ಎಚ್.ಎನ್. ಇವರಿಂದ ಸುಗಮ ಸಂಗೀತ ಕಾರ್ಯಕ್ರಮ, ನಂತರ ಕಲಾವಿದ ವೀರಪ್ಪ ಅಂದಲಗಿ ಇವರಿಂದ ಏಕಪಾತ್ರಾಭಿನಯ ನಡೆಯಲಿದೆ.
ಫೆ.1 ರಿಂದ ರಥೋತ್ಸವ ನಿಮಿತ್ತ ಮೂರು ದಿನಗಳು ಜಾತ್ರೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.