ಕಡರನಾಯ್ಕನಹಳ್ಳಿ: ಸಮೀಪದ ಕೊಕ್ಕನೂರು ಎಕೆಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವಿನ ಹಾರ ಹಾಕಿ ಶಾಲೆಗೆ ವಿನೂತನವಾಗಿ ಕರೆತಂದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಿಕ್ಷಕರು ಮನೆಮನೆಗೆ ತೆರಳಿ, ವಿದ್ಯಾರ್ಥಿಗಳ ಮನವೊಲಿಸಿ ಹಾರ ಹಾಕಿದರು. ಹಲಗೆ ಬಡಿಯುತ್ತಾ ಮೆರವಣಿಗೆಯಲ್ಲಿ ಶಾಲೆಗೆ ಕರೆ ತಂದರು. ‘ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ’ ಎಂದು ಘೋಷಣೆ ಕೂಗುತ್ತಾ ಗ್ರಾಮಸ್ಥರ ಗಮನ ಸೆಳೆದರು.
ಶಾಲೆಯ ಬಳಿ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಬ್ಯಾಗ್, ಸಮವಸ್ತ್ರ ನೀಡಲಾಯಿತು. ಸಿಹಿಯೂಟ ಬಡಿಸಲಾಯಿತು. ಮುಖ್ಯಶಿಕ್ಷಕ ಎಚ್.ಮರುಳಸಿದ್ದಪ್ಪ, ಶಿಕ್ಷಕರಾದ ಕಮಲಾಕರ, ಗೀತಾ, ಮೀನಾಕ್ಷಿ, ಪ್ರೇಮ, ಮಮತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.