ಹೊನ್ನಾಳಿ: ‘ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ಆಪರೇಶನ್ ಸಿಂಧೂರ ನಡೆಸಿ ಯಶಸ್ವಿಯಾಯಿತು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶುಕ್ರವಾರ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ 100 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ತಿರಂಗಾ ಯಾತ್ರೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಭಾರತದ ವಿರುದ್ಧ ಪ್ರತಿದಾಳಿಗೆ ಪಾಕಿಸ್ತಾನ 48 ಗಂಟೆಗಳ ದಾಳಿಯ ತಂತ್ರವನ್ನು ರೂಪಿಸಿತ್ತು. ಆದರೆ ನಮ್ಮ ಸೈನಿಕರು ಈ ಯೋಜನೆಯನ್ನು 8 ಗಂಟೆಗಳಲ್ಲಿ ಬುಡಮೇಲು ಮಾಡಿದರು’ ಎಂದು ತಿಳಿಸಿದರು.
‘48 ಗಂಟೆಗಳ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನ ಸೇನೆಯ ಯೋಜನೆಯನ್ನು ನಮ್ಮ ರಕ್ಷಣಾ ಪಡೆಗಳು ತಲೆಕೆಳಗು ಮಾಡಿದವು. ವಾಯುನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಭಾರತದ ಎದುರು ಪಾಕ್ ಮಂಡಿಯೂರುವಂತೆ ಮಾಡಿದವು’ ಎಂದು ಹೇಳಿದರು.
‘ಉಗ್ರರ ನೆಲೆ, ಮೂಲಸೌಕರ್ಯ ನಾಶಗೊಳಿಸುವ ಉದ್ದೇಶದಿಂದ ನಮ್ಮ ಪಡೆಗಳು ದಾಳಿ ನಡೆಸಿದ್ದವು. ಆದರೆ ಪಾಕಿಸ್ತಾನ ಡ್ರೋನ್ ಕ್ಷಿಪಣಿ ಬಳಸಿಕೊಂಡು ನಮ್ಮ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿತು. ನಮ್ಮನ್ನು ಕೆಣಕಿದ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ಕೊಡಲಾಯಿತು. ಆಪರೇಶನ್ ಸಿಂಧೂರದ ಸಮಯದಲ್ಲಿ ನೌಕಪಡೆ ಕೂಡಾ ಭಾಗಿಯಾಗಿದ್ದರೆ, ಪಾಕಿಸ್ತಾನವು 1971ಕ್ಕಿಂತಲೂ ಕೆಟ್ಟ ಫಲಿತಾಂಶವನ್ನು ಎದುರಿಸುತ್ತಿತ್ತು’ ಎಂದ ಹೇಳಿದರು.
ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.