ADVERTISEMENT

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಹೇಳಿಕೆ ಖಂಡನೀಯ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 2:44 IST
Last Updated 13 ಫೆಬ್ರುವರಿ 2026, 2:44 IST
ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸ್ಥಳವನ್ನು ಎಂಪಿ.ರೇಣುಕಾಚಾರ್ಯ ಪರಿಶೀಲಿಸಿದರು
ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸ್ಥಳವನ್ನು ಎಂಪಿ.ರೇಣುಕಾಚಾರ್ಯ ಪರಿಶೀಲಿಸಿದರು   

ಹೊನ್ನಾಳಿ: ‘ಭಾರತ ಮಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರಾಟ ಮಾಡಿದ್ದಾರೆ ಎಂಬ ಉದ್ಧಟತನದ ಹೇಳಿಕೆ ನೀಡಿ ಭಾರತೀಯರಿಗೆ ಅವಮಾನ ಮಾಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಕ್ಷಣ ಕ್ಷಮೆ ಕೇಳಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

ತಾಲ್ಲೂಕಿನ ತರಗನಹಳ್ಳಿಯಲ್ಲಿ ಫೆ. 21ರಂದು ನಡೆಯಲಿರುವ ವಿಕಸಿತ ಭಾರತ ಯೋಜನೆಯ ಜಾಗೃತಿ ಸಮಾರೋಪ ಸಮಾರಂಭದ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು.

ವಂದೇ ಮಾತರಂ ಗೀತೆಯನ್ನು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಡಿ ಗೌರವಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಸ್ವಾಗತಿಸುತ್ತೇನೆ ಎಂದರು.

ADVERTISEMENT

ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ಮುಖಂಡ ಜೆ.ಕೆ.ಸುರೇಶ್, ತರಗನಹಳ್ಳಿ ರಮೇಶ್, ನೆಲಹೊನ್ನೆ ಮಂಜುನಾಥ್, ಪ್ರಭಾಕರ್, ಹೊಳೆ ಬಸಪ್ಪ, ನಾಗರಾಜ್, ಬಸವನಗೌಡ, ಚಂದ್ರಪ್ಪ, ಶಿವಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.