ಹರಿಹರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025– 26ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಎ. ಇ.ಕೆ.ಜೆ (ಅರ್ಥಶಾಸ್ತ್ರ, ಐಚ್ಚಿಕ ಕನ್ನಡ, ಪತ್ರಿಕೋದ್ಯಮ) ಸ್ನಾತಕ ಪದವಿ ಕೋರ್ಸ್ ಪ್ರವೇಶಾತಿಗಾಗಿ ಪಿಯುಸಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಪ್ರವೇಶಾತಿ ಆರಂಭಿಸಲಾಗಿದೆ.
ಪತ್ರಿಕೋದ್ಯಮ ಪದವಿಯು ವೃತ್ತಿಪರ ಕೋರ್ಸ್ ಆಗಿದ್ದು, ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಪತ್ರಕರ್ತರು, ಸುದ್ದಿವಾಹಕರು, ರೇಡಿಯೊ ಕಾರ್ಯಕ್ರಮ ನಿರ್ವಾಹಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ, ಜಾಹೀರಾತು ಕ್ಷೇತ್ರ, ಈವೆಂಟ್ ಮ್ಯಾನೇಜ್‌ಮೆಂಟ್, ಫ್ರೀಲ್ಯಾನ್ಸಿಂಗ್ ಬರಹಗಾರರು, ಅನುವಾದಕರು, ಡಿಜಿಟಲ್ ಮಾರ್ಕೆಟಿಂಗ್, ಮನರಂಜನಾ ಮಾಧ್ಯಮಗಳು. ಜತೆಗೆ ಇಂದಿನ ನವ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಪಡೆಯುವ ಸಾಧ್ಯತೆ ಇದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಉನ್ನತ ವ್ಯಾಸಂಗ, ಸಂಶೋಧನೆ, ಸಾರ್ವಜನಿಕ ಸಮೀಕ್ಷಾ ಸಂಸ್ಥೆಗಳಲ್ಲೂ ಅವಕಾಶಗಳಿವೆ. ಹೆಚ್ಚಿನ ವಿವರಗಳಿಗೆ ಮೊ.ನಂ. 63662 66465 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.