ಹೊನ್ನಾಳಿ: ‘ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡದೇ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ದೂರಿದರು.
ಪಟ್ಟಣದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ಪಡಿತರ ವಿತರಕರ ಸಂಘದ ಮನವಿ ಸ್ವೀಕರಿಸಿ ಶನಿವಾರ ಮಾತನಾಡಿದರು.
‘ನಾವು ಪಡಿತರ ವ್ಯವಸ್ಥೆಯ ಮೂಲಕ ಪುಕ್ಕಟ್ಟೆಯಾಗಿ ನೀಡಲು ಹೊರಟಿದ್ದ ಅಕ್ಕಿಯನ್ನು ಕೇಂದ್ರ ಸರ್ಕಾರ ಈಗ ಮಾರಾಟ ಮಾಡುತ್ತಿದೆ’ ಎಂದು ಆರೋಪಿಸಿದರು.
ಪುರಸಭೆ ಸದಸ್ಯ ಧರ್ಮಪ್ಪ, ಆಹಾರ ಇಲಾಖೆಯ ನಿರೀಕ್ಷಕ ನಾಗರಾಜ್, ಹೊನ್ನಾಳಿ ತಾಲ್ಲೂಕು ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷ ಅರಬಗಟ್ಟೆ ಮಂಜಪ್ಪ, ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಚಿಕೊಪ್ಪ ಕುಬೇರಪ್ಪ, ಸಿಂಗಟಗೆರೆ ಅಣ್ಣಪ್ಪ, ಶಶಿಧರ್, ಚೇತನ್, ತುಗಲಹಳ್ಳಿ ಬಸವರಾಜಪ್ಪ, ಕೆ. ಪುಟ್ಟಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.