ADVERTISEMENT

ಯೂರಿಯಾ ಸಿಗದೇ ಬರಿಗೈಲಿ ಹಿಂದುರುಗಿದ ರೈತರು

ಜಗಳೂರು: ಯೂರಿಯಾ ಪಡೆಯಲು ನಿಲ್ಲದ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:49 IST
Last Updated 9 ಆಗಸ್ಟ್ 2025, 4:49 IST
ಜಗಳೂರಿನ ಎಪಿಎಂಸಿ ಆವರಣದಲ್ಲಿ ಯೂರಿಯಾ ರಸಗೊಬ್ಬರ ಪಡೆಯಲು ಶುಕ್ರವಾರ ಜಾತ್ರೆಯೋಪಾದಿಯಲ್ಲಿ ಸೇರಿದ್ದ ರೈತರು
ಜಗಳೂರಿನ ಎಪಿಎಂಸಿ ಆವರಣದಲ್ಲಿ ಯೂರಿಯಾ ರಸಗೊಬ್ಬರ ಪಡೆಯಲು ಶುಕ್ರವಾರ ಜಾತ್ರೆಯೋಪಾದಿಯಲ್ಲಿ ಸೇರಿದ್ದ ರೈತರು   

ಜಗಳೂರು: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ್ದ ರೈತರು ಯೂರಿಯಾ ಪಡೆಯಲು ಎಪಿಎಂಸಿ ಆವರಣದಲ್ಲಿ ದಿನವಿಡೀ ಕಸರತ್ತು ನಡಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಸುಕಿನಿಂದಲೇ ರೈತರು ಕಾದು ಕುಳಿತಿದ್ದರು. ನೂಕುನುಗ್ಗಲು ಉಂಟಾಗಿದ್ದರಿಂದ ಬಹುತೇಕ ರೈತರು ಯೂರಿಯಾ ಸಿಗದೇ ಅಧಿಕಾರಿಗಳನ್ನು ಶಪಿಸುತ್ತಾ ಬರಿಗೈಲಿ ಹಿಂದಿರುಗಿದರು.

ಯೂರಿಯಾ ರಸಗೊಬ್ಬರಕ್ಕೆ ತಾಲ್ಲೂಕಿನಲ್ಲಿ ಬೇಡಿಕೆ ಹೆಚ್ಚುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ತಾಲ್ಲೂಕು ಆಡಳಿತವು ಹೆಚ್ಚುವರಿಯಾಗಿ ಯೂರಿಯಾ ಪೂರೈಕೆಗೆ ಕ್ರಮ ಕೈಗೊಂಡಿದೆ. ಗುರುವಾರ ರಾತ್ರಿ ಬಂದಿದ್ದ 170 ಟನ್ ಯೂರಿಯಾ ಪಡೆಯಲು ರೈತರು ಮುಗಿಬಿದ್ದಿದ್ದರಿಂದ ಕೆಲವೇ ತಾಸುಗಳಲ್ಲಿ ಸಂಪೂರ್ಣ ಖಾಲಿಯಾಯಿತು.

ADVERTISEMENT

ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುವುದು ಕೃಷಿ ಜಮೀನಿನ ಒಳ್ಳೆಯದಲ್ಲ. ಜಮೀನಿಗೆ ಅವಶ್ಯಕತೆಯಿರುವಷ್ಟು ಮಾತ್ರ ಯೂರಿಯಾ ಬಳಸಬೇಕು. ನ್ಯಾನೊ ಯೂರಿಯಾ ಸಿಂಪಡಣೆ ಒಳ್ಳೆಯದು ಎಂದು ಸಲಹೆ ನೀಡುತ್ತಿದ್ದರೂ ರೈತರು ಕೇಳಲು ಸಿದ್ಧರಿಲ್ಲ. ಅಗತ್ಯ ಮೀರಿ ಖರೀದಿಸಿ ಇಟ್ಟುಕೊಳ್ಳುತ್ತಿದ್ದು, ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.