ADVERTISEMENT

‘ಯೋಗಾಸನದಿಂದ ರೋಗರುಜಿನ ದೂರ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:57 IST
Last Updated 21 ಜೂನ್ 2025, 15:57 IST
ಜಗಳೂರಿನಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಭಾಗವಹಿಸಿದ್ದರು 
ಜಗಳೂರಿನಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಭಾಗವಹಿಸಿದ್ದರು    

ಜಗಳೂರು: ‘ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಒತ್ತಡದಿಂದ ಕೂಡಿದ ಧಾವಂತದಲ್ಲಿ ಜೀವನ ನಡೆಸುತ್ತಿದ್ದು, ಯೋಗ ಮತ್ತು ಧ್ಯಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ’ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಸಲಹೆ ನೀಡಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಶನಿವಾರ ಬಿಜೆಪಿ ವಿಕಸಿತ ಭಾರತ ಹಾಗೂ ಸರ್ಕಾರಿ ಆಯುರ್ವೇದ ಪ್ರಕೃತಿ ಚಿಕಿತ್ಸೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.

ಆಯುಷ್ ಇಲಾಖೆ ಯೋಗ ಪ್ರಕೃತಿ ಚಿಕಿತ್ಸಾ ತಜ್ಞೆ ಡಾ.ಶ್ವೇತಾ ಮಾತನಾಡಿದರು. ಯೋಗ ಪಟು ಸುಜಾತಮ್ಮ‌, ಬಿಜೆಪಿ ಯುವ ಮುಖಂಡರಾದ ಸೂರಲಿಂಗಪ್ಪ, ಓಬಳೇಶ್, ಎ.ಎಂ.ಮರುಳಾರಾಧ್ಯ, ಹನುಮಂತಪ್ಪ, ಬಿ.ಆರ್.ಬಾಣೇಶ್ವರ್, ಕೃಷ್ಣ ಲ್ಯಾಬ್ ಶಿವು, ಸಂತೋಷ್, ಕಾಯಿ ಮಂಜಣ್ಣ, ಯೋಗಾನಂದ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.